ಚಳ್ಳಕೆರೆ :
ವಿಧಾನ ಸೌಧದ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ (ಸರಕಾರಿ ವಾಹನ)ಗೆ ಬೆಂಕಿ ಹಚ್ಚಿದ್ದಾನೆ.
ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿ ಮುಂದೆ ಎಂದಿನಂತೆ ತಹಶಿಲ್ದಾರ್ ಕರ್ತವ್ಯಕ್ಕೆ ತಮ್ಮ ಸರಕಾರಿ ವಾಹನದಲ್ಲಿ ಬಂದು ತಾಲೂಕು ಕಛೇರಿ ಮುಂದೆ ನಿಲ್ಲಿಸಿ ಒಳಹೋಗಿದ್ದಾರೆ ಆದರೆ ತಹಶಿಲ್ದಾರ್ ಬಂದು ಒಳಹೋದ ಕೆಲವೆ ಕ್ಷಣಗಳಲ್ಲಿ ಏಕಾ ಏಖಿ ಮುಖ್ಯಧ್ವಾರದಿಂದ ಬಂದ ಪೃಥ್ವಿರಾಜ್ ಸರಕಾರಿ ವಾಹನದ ಮೇಲೆ ನಿಂತುಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇನ್ನೂ ಬೆಂಕಿ ಹಚ್ಚಿದ ಕೆಲವೆ ಕ್ಷಣಗಳಲ್ಲಿ ಸಾರ್ವಜನಿಕರು ಸಿಬ್ಬಂದಿ ವರ್ಗ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾವುತದಿಂದ ತಪ್ಪಿಸಿದ್ದಾರೆ.
ಇನ್ನೂ ಪೃಥ್ವಿರಾಜ್ ರನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇನ್ನೂ ತಹಶಿಲ್ದಾರ್ ರೇಹಾನ್ ಪಾಷ ಹಾಗೂ ಸಿಬ್ಬಂದಿ ವರ್ಗ ಭಯಬೀತರಾಗಿ ಪೊಲೀಸ್ ಠಾಣೆಮುಂದೆ ರಕ್ಷಣೆ ನೀಡಬೇಕೆಂದು ಕೆಲ ಕಾಲ ಪ್ರತಿಭಟನೆ ನಡೆಸಿದರು.
ಇನ್ನೂ ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣಬೇಟಿ ನೀಡಿ
ತಹಶೀಲ್ದಾರ್ ವಾಹನಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಕಿರಾತಕ ಪೃಥ್ವಿರಾಜ್ ರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ತನಿಖೆ ಕೈಗೊಂಡಿದ್ದಾರೆ.
ಸರ್ಕಾರಿ ವಾಹನವನ್ನು ವಿರೂಪ ಗೊಳಿಸಿದ ಪೃಥ್ವಿರಾಜ್ ಎಂಬ ಯುವಕ ಈ ಹಿಂದೆ ಅವನ ಮೇಲೆ 107 ಕೇಸ್ ದಾಖಲಾಗಿತ್ತು , ತಹಶೀಲ್ದಾರ್ ಗೆ ಕ್ಷಮೆ ಪತ್ರ ಸಲ್ಲಿಸಿ 2 ಲಕ್ಷ ತಪ್ಪೊಪ್ಪಿಗೆಯ ಪತ್ರ ಕೊಟ್ಟಿದ್ದ ,
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ನನಗೆ ಅವಮಾನವಾಗಿದೆ & ನನ್ನನ್ನು ದಂಡಿಸಿದ್ದಾರೆ, ಈ ನ್ಯಾಯಕ್ಕೋಸ್ಕರ ಎಸ್ಪಿ ಕಡೆಯಿಂದ ಕಂಪ್ಲೇಂಟ್ ಕೊಟ್ಟಿದ್ದೆ , ಈ ಹಿನ್ನಲೆ ASI ಮುಷ್ಟೂರಪ್ಪ ಸಸ್ಪೆಂಡ್ ಆಗಿದ್ದಾರೆ, ಕಂಪ್ಲೇಂಟ್ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ನಾನು ವಿಡಿಯೋ ಮಾಡಿದ್ದೆ,
ಈ ಹಿನ್ನಲೆಯಲ್ಲಿ ಪೊಲೀಸ್ 4 ಸಿಬ್ಬಂದಿಗಳು ನನ್ನನ್ನು ಮಾನ ಇಚ್ಛಯವಾಗಿ ದಂಡಿಸಿದ್ದಾರೆ
ಈ ಕಾರಣದಿಂದಾಗಿ ತಹಶೀಲ್ದಾರ್ ಜಿಪಿಗೆ ಪೆಟ್ರೋಲ್ ಸುರಿಸು ಬೆಂಕಿ ಹಚ್ಚಿದ್ದೇನೆ , ನಾನು ಬೆಂಗಳೂರಲ್ಲಿ ಕೂಡ ನನ್ನ ಸ್ವಂತ ಬೈಕು ಸುಟ್ಟು ಪ್ರತಿಭಟಿಸಿದ್ದೆ , ಬೆಂಗಳೂರು ಪೊಲೀಸ್ ಸ್ಟೇಷನ್ನಿಗೆ 2400 ದಂಡ ಕಟ್ಟಿದ್ದೇನೆ ಎಂದು ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ.
ಇನ್ನೂ ಸರಕಾರಿ
ಜೀಪಿನ ಮುಂಬಾಗ ಸುಟ್ಟು ಕರಕಲಾಗಿದ್ದು ಹೆಚ್ಚಿನ ಅನಾವುತ ತಪ್ಪಿದಂತಾಗಿದೆ.
ಈ ಪ್ರಕರಣವನ್ನು ಡಿ ಎಸ್ ಪಿ ರಾಜಣ್ಣ& ಪಿಎಸ್ಐ ಶಿವರಾಜ್ ಪ್ರಕರಣ ದಾಖಲಿಸಿಕೊಂಡು ತನಕೆ ಕೈಗೊಂಡಿದ್ದಾರೆ.