ಶಿಕ್ಷಕರು ಪಠ್ಯೆತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಶಿಕ್ಷಕರು ವಿಧ್ಯಾರ್ಥಿಗಳ ಸಾಮಾರ್ಥ್ಯವನ್ನು ಅರಿತು, ಅವರ ಸರ್ವತೋಮುಖ ಬೆಳವಣೆಗೆಗೆ ಶ್ರಮಿಸಬೇಕು ಸಮಾಜದಲ್ಲಿ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕರ ಹುದ್ದೆ ಅತ್ಯಂತ ಮಹತ್ವ ಹಾಗೂ ಪವಿತ್ರವಾದುದು, ಶಿಕ್ಷಣ ಹುದ್ದೆ ಉತ್ತಮ ಸ್ಥಾನ ಪಡೆದದ್ದು ಶಿಕ್ಷಕರು ತಮ್ಮ ಮೇಲಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಅವರು ನಗರದ ವಾಲ್ಮಕಿ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣ ಜಯಂತಿಯ ಅಂಗವಾಗಿ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಜವಾಬ್ದಾರಿ ಸ್ಥಾನವಾಗಿದ್ದು ಪ್ರತಿಯೊಬ್ಬ ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಹೆಚ್ಚಿನ ಅಧ್ಯಯನ ತೊಡಗುವ ಅಗತ್ಯವಿದೆ. ಮಕ್ಕಳನ್ನು ಶಿಕ್ಷಕರು ಸರ್ವತೊಮುಖವಾಗಿ ಮುಂದೆ ಬರಲು ಪ್ರೇರೆಪಿಸಲು ಸಾಧ್ಯವಿದೆ. ಶಿಕ್ಷಕರು ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠಮಾಡಿ ಮನೆಗೆ ಹೋಗುವ ನೌಕರಿ ವರ್ಗದವರಾಗದೆ, ದೇಶವನ್ನು ನಿರ್ಮಾಣ ಮಾಡುವ ಒಬ್ಬ ವ್ಯಕ್ತಿಯನ್ನು ಸೃಷ್ಠಿಮಾಡುವ ವ್ಯಕ್ತಿತ್ವವನ್ನು ತಯಾರು ಮಾಡಿ ಎಂದರು.

ತಾಪಂ ಇಓ ಶಶಿಧರ್ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಯಾರು ಗೌರವಿಸುತ್ತಾರೋ ಅಂತವರು ಉನ್ನತ ಮಟ್ಟಕ್ಕೆ ಹೊಗುತ್ತಾರೆ. ಶಾಲಾ ಮಕ್ಕಳನ್ನು ತಮ್ಮ ಸ್ವತಃ ಮಕ್ಕಳಂತೆ ಯಾರು ಕಾಣುತ್ತಾರೋ ಅವರು ಮಾದರಿ ಶಿಕ್ಷಕರಾಗುತ್ತಾರೆ. ಇಂದು ಕನ್ನಡ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ, ಖಾಸಗಿ ಶಾಲೆಗೆ ಪೈಪೋಟಿ ನೀಡುವಲ್ಲಿ ಸರ್ಕಾರಿ ಶಾಲೆಯ ಮ್ಕಕಳು ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವಂತೆ ಶಿಕ್ಷಕ ಪ್ರೆರಕ ಶಕ್ತಿಯಾಗಿರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಬಯಸುವರು ಪೂರ್ವಜನ್ಮದ ಪುಣ್ಯದ ಕೆಲಸ, ಅತಂಹ ವೃತ್ತಿಯನ್ನು ಗೌರಯುತವಾಗಿ ವೃತ್ತಿಗೆ ಚುತಿಬರದೆ ಹಾಗೇ ಕಾಪಾಡಿಕೊಳ್ಳಬೇಕು, ಅಂದಿನ ಕಾಲದ ಬಡಕುಟುಂಬದ ಕೇವಲ ದಿನಕೂಲಿ ಕಾರ್ಮಿಕನ ಮಗನಾಗಿ ಹುಟ್ಟಿದ ಡಾ. ಸರ್ವಪಲ್ಲಿ ರಾಧಕೃಷ್ಣನ್ ಇಂದು ಗುರು ವೃಂಧಕ್ಕೆ ಮಾದರಿಯಾಗಿದ್ದಾರೆ. ಅಂದಿನ ವಿರ್ದ್ಯಾರ್ಥಿವೇತನದಿಂದ ತನ್ನ ಎಲ್ಲಾ ಹಂತದ ಪದವಿಗಳನ್ನು ಮುಗಿಸಿ ಈಡೀ ದೇಶಕ್ಕೆ ನಿರ್ಮಾಮೃತರಾಗಿದ್ದಾರೆ ಎಂದರು.

ಇನ್ನೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತಾ, ಸದಸ್ಯರಾಘವೇಂದ್ರ, ಸುಮಕ್ಕ ಅಂಜಿನಪ್ಪ, ಕವಿತಾ, ಶಿಕ್ಷಕರಾದ ಜಿಟಿ.ವೀರಭದ್ರಸ್ವಾಮಿ, ಪಾಲಯ್ಯ, ರಾಜುಕುಮಾರ್, ಹೆಚ್.ಹನುಮಂತಪ್ಪ, ಶ್ರೀನಿವಾಸ್, ಡಿಟಿ.ಶ್ರೀನಿವಾಸ್, ದಯಾನಂದ್, ಬಿಆರ್‌ಸಿ ಮಂಜುನಾಥ,ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಪ್ರಾಂಶುಪಾಲರಾದ ಲೀಲಾವತಿ, ಉಪನಿರ್ದೇಶಕರಾದ ಮಂಜುನಾಥ್, ನಾಸಿರುದ್ಧೀನ್,
ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪಾದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!