ಚಳ್ಳಕೆರೆ :
ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ
ಪೈಗಂಬರ್, ಬಸವಣ್ಣ ಇನ್ನು ಅನೇಕ ಸಾಧು ಸಂತರುಗಳು ಸಿಹಿ
ಕೊಟ್ಟಿದ್ದಾರೆ.
ಆದರೆ ಸಿಹಿಯನ್ನು ಆಸ್ವಾದಿಸುವ ಮನಸ್ಸುಗಳು
ಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದು
ಹೊಸದುರ್ಗದ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಬೇಸರ
ವ್ಯಕ್ತಪಡಿಸಿದರು.
ಅವರು ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ
ಮಾತಾಡಿದರು.
ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ.
ಅದರಲ್ಲೂ ವಿದ್ಯಾವಂತರು ಹೆಚ್ಚು ಮತಾಂಧತೆಗೆ
ಬಲಿಯಾಗುತ್ತಿದ್ದಾರೆ. ಎಲ್ಲರೂ ಒಂದೆ ಎಂಬ ಭಾವನೆ ಮೂಡಬೇಕು
ಎಂದರು.