ಚಳ್ಳಕೆರೆ :
ವಿಧಾನ ಸೌಧದ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ.
ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿ ಮುಂದೆ ಎಂದಿನಂತೆ ತಹಶಿಲ್ದಾರ್ ಕರ್ತವ್ಯಕ್ಕೆ ತಮ್ಮ ಸರಕಾರಿ ವಾಹನದಲ್ಲಿ ಬಂದು ತಾಲೂಕು ಕಛೇರಿ ಮುಂದೆ ನಿಲ್ಲಿಸಿ ಒಳಹೋಗಿದ್ದಾರೆ ಆದರೆ ತಹಶಿಲ್ದಾರ್ ಬಂದ ಒಳಹೋದ ಕೆಲವೆ ಕ್ಷಣಗಳಲ್ಲಿ ಏಕಾ ಏಖಿ ಬಂದ ಪೃಥ್ವಿರಾಜ್ ಸರಕಾರಿ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇನ್ನೂ ಬೆಂಕಿ ಹಚ್ಚಿದ ಕೆಲವೆ ಕ್ಷಣಗಳಲ್ಲಿ ಸಾರ್ವಜನಿಕರು ಸಿಬ್ಬಂದಿ ವರ್ಗ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾವುತದಿಂದ ತಪ್ಪಿಸಿದ್ದಾರೆ.
ಇನ್ನೂ ಪೃಥ್ವಿರಾಜ್ ರನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
.