ಚಳ್ಳಕೆರೆ : ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮೂರು ತಾಲೂಕುಗಳ ಶಿವಮೊಗ್ಗ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡಿದ ತಾಲೂಕು ಸಂಘಗಳ ಅಧ್ಯಕ್ಷರು, ಪ್ರತಿನಿಧಿ, ಕಾರ್ಯದರ್ಶಿಗಳಿಗೆ ಕೃತಜ್ಞತ ಸಮರ್ಪಣಾ ಸಮಾರಂಭದಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಬಿಸಿ.ಸಂಜೀವಮೂರ್ತಿ ಮಾತನಾಡಿ,

ಶಿಮುಲ್ ನಿರ್ದೇಶಕರನ್ನಾಗಿ ಮಾಡಿದ ಎಲ್ಲಾ ನನ್ನ ಪದಾಧಿಕಾರಿಗಳಿಗೆ ಧನ್ಯವಾದಗಳು ಅರ್ಪಿಸುತ್ತೆನೆ, ಹಾಲು ಉತ್ಪಾದಕತೆಗೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಸೂಕ್ತವಾದ ಕ್ರಮ ಕೈಗೊಂಡು ಹಾಗೂ ಹಾಲು ಉತ್ಪಾದಕರ ಸಮಸ್ಯೆಗಳ ಗಮನಾರ್ಹ ಕೆಲಸ ಮಾಡುತ್ತವೆ ಎಂದರು.

ಅವರು ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿರ್ದೇಶಕರಾಗಿ ಆಯ್ಕೆಯಾದಂತ ನಾಲ್ವರಿಗೆ ಹಾಗೂ ಚುನಾವಣೆಯಲ್ಲಿ ತಮಗೆ ಮತ ನೀಡಿದಂತ ತಾಲೂಕು ಸಂಘಗಳ ಅಧ್ಯಕ್ಷರು, ಪ್ರತಿನಿಧಿ, ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದಂತಹ ಕೃತಜ್ಞತಾ ಸಮರ್ಪಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಚಳ್ಳಕೆರೆ ನಗರದಲ್ಲಿ ಈಗಾಗಲೇ ಉತ್ಪತ್ತಿಯಾಗುವ ಹಾಲಿನ ಉತ್ಪಾದನೆ ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಗುರು ಇದೆ, ಹಾಗೂ ದರದ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಸ್ಥಳೀಯವಾಗಿ ಹಾಲು ಉತ್ಪಾದನಾ ಶೇಖರಣ ಘಟಕಗಳನ್ನು ಪ್ರಸ್ತಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ,

ಇನ್ನು ಹಾಲು ಉತ್ಪಾದಕರ ಕುಂದು ಕೊರತೆಗಳ ಬಗ್ಗೆ ಈ ಸಭೆಯಲ್ಲಿ ಸಂಪೂರ್ಣವಾಗಿ ಮಾಹಿತಿ ಪಡೆದು ಮುಂದಿನ ಹಂತದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಶಿವಮೊಗ್ಗ ಆಡಳಿತ ಮಂಡಳಿ ಬದ್ದವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾದ ಜಿಪಿ ರೇವಣಸಿದ್ದಪ್ಪ, ಬಿ ಸಿ.ಸಂಜೀವಮೂರ್ತಿ, ಜೆ ಬಿ ಶೇಖರಪ್ಪ, ಬಿ ವಿ ಆರ್ ರವಿಕುಮಾರ್ ಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿದಂತಹ ತಾಲೂಕು ಸಂಘಗಳ ಅಧ್ಯಕ್ಷರು ಪ್ರತಿನಿಧಿ ಕಾರ್ಯದರ್ಶಿಗಳಿಗೆ ಅಭಿನಂದನೆ‌ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಡಾಕ್ಟರ್ ಸಂದೀಪ್, ನಜೀರ್ ಬೇಗಂ , ಉದಯ್ ಕುಮಾರ್, ದೊಡ್ಡ ಲಿಂಗೇಗೌಡ ,,ನಗರಂಗೆರೆ ಕುಮಾರಸ್ವಾಮಿ , ಇನ್ನಿತರರು ಭಾಗವಹಿಸಿದ್ದರು.

Namma Challakere Local News
error: Content is protected !!