ಚಳ್ಳಕೆರೆ : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದಿಂದ ಶ್ರೀಕೃಷ್ಣಾ ಜನ್ಮಷ್ಠಾಮಿಯನ್ನು ಚಳ್ಳಕೆರೆ ನಗರದ ವಾಸವಿ ಮಹಲ್ ನಲ್ಲಿ ಇಸ್ಕಾನ್ ವತಿಯಿಂದ ಆಯೋಜಿಸಲಾಗಿತ್ತು.
ಇಸ್ಕಾನ್ ಚಿತ್ರದುರ್ಗ ವತಿಯಿಂದ ಚಳ್ಳಕೆರೆಯಲ್ಲಿ ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ವತಿಯಿಂದ ಹರೇ ಕೃಷ್ಣ ಹರೇ ಕೃಷ್ಣ , ಹರೇ ರಾಮ ಹರೇ ರಾಮ ಎಂಬ ಘೋಷ ವಾಕ್ಯಗಳನ್ನು ಭಕ್ತಾದಿಗಳು ಹಾಡುತ್ತ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ತೊಟ್ಟಿಲು ತೂಗುವುದರ ಮೂಲಕ ಚಾಲನೆ ನೀಡಿದರು.
ಇನ್ನೂ ಇದೆ ಸಂದರ್ಭದಲ್ಲಿ ನಗರದ ಹಲವು ಭಕ್ತಾದಿಗಳು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾದರು, ಇದೇ ಸಂದರ್ಭದಲ್ಲಿ ನಗರ ಸಂಕೀರ್ತನ ಮಹಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮ , ಆಧ್ಯಾತ್ಮಿಕ ಪ್ರವಚನ, ಈಗೆ ಮಹಾಮಂಗಳಾರತಿ ಮೂಲಕ ಮಹಾಪ್ರಸಾದವನ್ನು ಎಲ್ಲಾ ಭಕ್ತಾದಿಗಳಿಗೆ ಉಣಬಡಿಸಿದರು.
ಇದೇ ಸಂಧರ್ಭದಲ್ಲಿ ಸಿಟಿ ಕೇಬಲ್ ಡಿ ನಾಗಪ್ಪ ರವರನ್ನು ಆತ್ಮೀಯವಾಗಿ ಅಭಿನಂದಿಸಿದರು, ಇನ್ನು ಇಸ್ಕಾನ್ ಟೆಂಪಲ್ ಭಕ್ತಾದಿಗಳು ಹಾಗೂ ನಗರದ ಶ್ರೀ ಕೃಷ್ಣನ ಭಕ್ತಾದಿಗಳು ಸುಮಾರು ಸಂಖ್ಯೆಯಲ್ಲಿ ಸೇರಿ ಇಡೀ ಚಿಕ್ಕ ಮಕ್ಕಳ ನೃತ್ಯ ಕಣ್ಮನ ಸೋಲುವಂತಿತ್ತು.