ಮುದ್ರಣ ಮಾಧ್ಯಮ ಕ್ಷೀಣಿಸುತ್ತಿರುವುದು ಆತಂಕಕಾರಿ ; ಎಸ್.ನಾಗಣ್ಣ.

ಚಳ್ಳಕೆರೆ-26 ಆಧುನಿಕತೆ ಬೆಳೆದಂತೆ ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಎಂದು ಪ್ರಜಾಪ್ರಗತಿ ಪತ್ರಿಕೆ ಹಿರಿಯ ಸಂಪಾದಕ ಎಸ್.ನಾಗಣ್ಣ ಹೇಳಿದರು.
ಅವರು ಸೋಮವಾರ ತಾಲೂಕಿನ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ಮಾತನಾಡಿದರು. ಅತೀವ ಸಂಕಷ್ಟದಲ್ಲಿ ಮಾಧ್ಯಮ ಕ್ಷೇತ್ರ ನಡೆಯುತ್ತಿದೆ.‌ ಓದುಗರ ವಿಶ್ವಾಸ ಮೂಡುವಂತಹ ವರದಿ ಪ್ರಕಟಗೊಳ್ಳಲಿ, ಉತ್ತಮ ಬರಹಗಳು ಹೆಚ್ಚು ಮೂಡಿಬರಲಿ, ಯುವ ಬರಹಗಾರರು ನೈಜವರದಿಗೆ ಬೆಳಕು ಚೆಲ್ಲುವತ್ತ ಮುನ್ನಡೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಸುದ್ದಿಗಳು ಸತ್ಯವೋ, ಸುಳ್ಳು ಎಂದು ಪರಾಮರ್ಶಿಸುವುದು ಕಬ್ಬಿಣದ ಕಡಲೆ ಆಗುತ್ತಿದೆ. ವರದಿಗಾರರು ಸತ್ಯಸುದ್ದಿಗೆ ಹೆಚ್ಚಿನ ಒತ್ತು ನೀಡುವುದರಿಂದ ಮುದ್ರಣ ಮಾಧ್ಯಮ ಇನ್ನಷ್ಟು ಗಟ್ಟಿಗೊಳ್ಳಿಸಬೇಕು ಹಾಗೂ ಸತ್ಯಕ್ಕೆ ಹತ್ತಿರವಾಗಬೇಕು. ಒಂದು ಸುಳ್ಳು ಸುದ್ದಿ ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆದ್ದರಿಂದ, ಒಂದು ವಿಷಯವನ್ನು ವರದಿ ಮಾಡುವ ಮುನ್ನ ಎಚ್ಚರ ವಹಿಸಬೇಕು ಹಾಗೂ ಸತ್ಯಾಸತ್ಯತೆಯನ್ನು ಅರಿತು ಬರೆಯಬೇಕೆಂದು ಕಿವಿಮಾತು ಹೇಳಿದರು.
ಪತ್ರಿಕಾ ರಂಗ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದರೂ ವಾಕ್‌ ಸ್ವಾತಂತ್ರ್ಯದ ವಿಧಿಯಡಿ ಕಾರ್ಯನಿರ್ವಹಿಸುತ್ತದೆ. ಹಾಗೆಂದು ಬೇಕಾದನ್ನ ಬರೆಯಲು ಸಾಧ್ಯವಿಲ್ಲ. ಅದು ನಿರ್ಬಂಧನೆಗಳನ್ನು ಒಳಗೊಂಡಿದೆ. ಪತ್ರಿಕಾ ರಂಗ ಇರುವುದು ಹಣ ಗಳಿಸಲು ಅಲ್ಲ. ಜನರ ಸೇವೆಗೆ ಎಂಬ ಮಹಾತ್ಮ ಗಾಂಧೀಜಿ ಹೇಳಿಕೆ ಅಕ್ಷರಶಃ ಸತ್ಯ ಎಂಬುದು ತಿಳಿದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತಾಧಿಕಾರಿ ಎಚ್.ಗಂಗಾಧರ, ಸತೀಶ್, ಪತ್ರಕರ್ತರಾದ ಮಂಜುನಾಥ, ಹರೀಶ್, ವೀರೇಶ್, ಶಿವಮೂರ್ತಿ ಮುಂತಾದವರು ಇದ್ದರು.

About The Author

Namma Challakere Local News
error: Content is protected !!