“ಸುಗಮ ಜೀವನಕ್ಕೆ ಧೈರ್ಯ ಮುಖ್ಯ”- ಶ್ರೀಶಾರದಾಶ್ರಮದ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ.
ಚಳ್ಳಕೆರೆ:-ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಹತ್ತಿರದ ದೇವರಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ತಿಂಗಳಾಂತ್ಯದ ವಿಶೇಷ ಭಜನೆ ಮತ್ತು ಸತ್ಸಂಗದಲ್ಲಿ ಮಾತಾನಾಡಿದ ಅವರು ಇಂದಿನ ಆಧುನಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಾಂಗವಾಗಿ ಎದುರಿಸಲು ಧೈರ್ಯ ಮತ್ತು ಆತ್ಮವಿಶ್ವಾಸ ಹೊಂದುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಧ್ಯಾನ, ಭಜನೆ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹಾಗೂ ಶ್ರೀಧರ ಸ್ವಾಮಿಗಳ ಕುರಿತಾದ ಎರಡು ಕಥೆಗಳನ್ನು ಹೇಳಲಾಯಿತು.
ಈ ಸತ್ಸಂಗದಲ್ಲಿ ಡಾ.ಭೂಮಿಕ ಅವರು ಶ್ರೀಮಾತೆ ಶಾರದಾದೇವಿ ಅವರ ಜೀವನ ಕಥೆಯನ್ನು ತಿಳಿಯಪಡಿಸಿದರು.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಶ್ರೀಮತಿ ಲಕ್ಷ್ಮೀ ಚೆನ್ನಕೇಶವ, ಸಂತೋಷ್, ಡಾ.ಭೂಮಿಕ, ಯತೀಶ್ ಎಂ ಸಿದ್ದಾಪುರ, ಚೇತನ್,ವಿನೋದ್, ಪ್ರೇಮಕುಮಾರ್, ಪುಷ್ಪ, ಗ್ರಾಮಸ್ಥರಾದ ಎತ್ತಿನ ಕಾಟಯ್ಯ,ಬೋರಮ್ಮ,ಬೊಮ್ಮಕ್ಕ,ವಿಜಯಮ್ಮ ಮುಂತಾದ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ್ದರು.