ಚಳ್ಳಕೆರೆ :
ಬಯಲು ಸೀಮೆಯಲ್ಲಿ ನೀರು ನಿಲ್ಲಿಸುವ ಹಾಗೂ ಹಸಿರುಕರಣಕ್ಕೆ ಮಹತ್ವ ನೀಡುವ ಹಾಗು ಕಾಮಗಾರಿಗಳ ಪರೀಶಿಲನೆಗೆ ದಿಡೀರ್ ಬೇಟಿ ನೀಡಿದ ಕೇಂದ್ರ ಜಲಶಕ್ತಿ ತಂಡ ತಾಲೂಕಿನ ವಿವಿಧ ಕಾಮಗಾರಿಗಳ ಪರೀಶಿಲನೆ ನಡೆಸಿದರು.
ತಾಲೂಕಿನ ನನ್ನಿವಾಳ ಭಾಗದ ಸೋಮನಕೆರೆ ಭಾಗದಲ್ಲಿ ಅರಣ್ಯ ಇಲಾಖೆಯಿಂದ ಸಸಿನೆಡುವ ಜಾಗಕ್ಕೆ ತೆರಳಿ ಪರೀಶಿಲನೆ ನಡೆಸಿದರು.
ತಾಲ್ಲೂಕು ಪಂಚಾಯತ ಇಓ ಶಶಿಧರ್ ಹಾಗೂ ಕೃಷಿಜಂಟಿ ನಿರ್ದೇಶಕ ಪ್ರಭಾಕರ್ , ಸಹಾಯಕ ಕೃಷಿ ಅಧಿಕಾರಿ ಜೆ.ಅಶೋಕ್ ರವರ ನೇತೃತ್ವದಲ್ಲಿ ಕೇಂದ್ರ ಜಲ ಶಕ್ತಿ ತಂಡ ಕಾಮಗಾರಿಗಳನ್ನು ವೀಕ್ಷಿಸಿದರು.
ಇನ್ನೂ ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕ ಸಂತೋಷ, ರವರು ಕೇಂದ್ರದಿಂದ ಅಗಮಿಸಿದ ಜಲ ಶಕ್ತಿ ತಂಡಕ್ಕೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯಲ್ಲಿ ಅನುಷ್ಠಾನ ಗೊಂಡ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿಸಿದರು.
ಎರಡು
ಚೆಕ್ ಡ್ಯಾಂ ಹಾಗೂ ಅರಣ್ಯ ಇಲಾಖೆಯಿಂದ ಬೆಳೆಸಿದ ಸಸಿಗಳನ್ನು ವಿಕ್ಷಣೆ ಮಾಡಿಸಿದರು.
ಈ ಸಮಯದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ್, ತಾಲ್ಲೂಕಿನ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ,ಸಹಯಾಕ ಕೃಷಿ ಅಧಿಕಾರಿ ಜೆ.ಅಶೋಕ್, ಅರಣ್ಯ ಅಧಿಕಾರಿಗಳು, ತೋಟಗಾರಿಕೆ ಇಲಾಖಾಧಿಕಾರಿಗಳು ಹಾಜರಿದ್ದರು.