ಚಳ್ಳಕೆರೆ :

ಚಳ್ಳಕೆರೆ ತಾಲ್ಲೂಕು, ಪರಶುರಾಂಪುರ ಹೋಬಳಿ, ನಾಗಗೊಂಡನಹಳ್ಳಿಯ ಬಳಿ ಹರಿಯುತ್ತಿರುವ ವೇದಾವತಿ ನದಿ ಮತ್ತು ರಾಣೀಕೆರೆ ಗರಣಿ ಹಳ್ಳ ಇವು ಕೂಡಲಸಂಗಮ
ದೇವಸ್ಥಾನದ | ಹತ್ತಿರ ಎರಡೂ ಕೂಡುವುದರಿಂದ ಕೂಡಲಸಂಗಮವೆಂದು ನಾಮಕರಣ ಮಾಡಿ‌ ಈ ಪ್ರದೇಶವನ್ನು ಪ್ರವಾಸೋಧ್ಯಮ ಇಲಾಖೆಯ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿಪಡಿಸಿ
ಕಾರ್ಯರೂಪಕ್ಕೆ ತರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮನವಿ ಮಾಡಿದ್ದಾರೆ.

ಅವರು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು
ಈ ಕೂಡಲ ಸಂಗಮದ ಹತ್ತಿರವಿರುವ ದೇವಸ್ಥಾನಗಳಲ್ಲಿ ಪ್ರತಿ ಶನಿವಾರ
ಸೋಮವಾರ ಈ ಪುಣ್ಯ ಕ್ಷೇತ್ರಕ್ಕೆ ಬಂದು ಭಕ್ತಾದಿಗಳು ಪೂಜೆ ಸಲ್ಲಿಸಿ ಪಾವನರಾಗುತ್ತಿದ್ದಾರೆ.

ಈ ದೇವಸ್ಥಾನದಲ್ಲಿರುವ
ಪುರಾತನ ಕಾಲದಲ್ಲಿ ಪ್ರತಿಷ್ಠಾಪನೆಯಾಗಿದ್ದು, ಈ ದೇವಸ್ಥಾನದ ಬಳಿ ಚಳ್ಳಕೆರೆ ತಾಲ್ಲೂಕಿನ ಬುಡಕಟ್ಟು
ದೇವರುಗಳು ಕೂಡಲಸಂಗಮ ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಲು ರಂಗವ್ವನಹಳ್ಳಿ, ಕರೀಕೆರೆ, ಕಾಲವೇಹಳ್ಳಿ,
ಯಾದಲಗಟ್ಟೆ, ಕ್ಯಾತಗೊಂಡನಹಳ್ಳಿ, ಗುಡಿಹಳ್ಳಿ, ಬೂದಿಹಳ್ಳಿ, ದೊಡ್ಡ ಉಳ್ಳಾರ್ತಿ, ಚಿತ್ರನಾಯಕನಹಳ್ಳಿ, ಘಟಪರ್ತಿ, ಚನ್ನಗಾನಹಳ್ಳಿ, ಹೊನ್ನೂರು, ದೇವರೆಡ್ಡಿಹಳ್ಳಿ, ಬುಕ್ಕಂಬೂದಿ ಹೀಗೆ ಅನೇಕ ಗ್ರಾಮಗಳಿಂದ ದೇವತೆಗಳಿಗೆ ಪುಣ್ಯ ಸ್ನಾನವೆಂದು‌ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿಗೆ ಬರಲು ರಸ್ತೆ ಇಲ್ಲದೆ ಮುಳ್ಳು ಜಾಲಿಗಳ ಬೆಳೆದು, ತಂಗಲು ಸಮುದಾಯ ಭವನಗಳಿಲ್ಲದೆ ಭಕ್ತಾದಿಗಳು ರಾತ್ರಿ ಸಮಯದಲ್ಲಿ ಉಳಿದುಕೊಳ್ಳಲು ಆಗದೆ ಇರುವ ಸ್ಥಿತಿ ನಿರ್ಮಾಣವಾಗಿದೆ.

ಕೂಡಲಸಂಗಮ ದೇವಸ್ಥಾನದ ವೇದಾವತಿ ನದಿಗೆ ಅಡ್ಡಲಾಗಿ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ
ಶಾಸಕರಾದ ಟಿ.ರಘುಮೂರ್ತಿಯವರ ಪರಿಶ್ರಮದಿಂದ ಬ್ಯಾರೇಜ್ ನಿಲ್ಲಿಸಿದ್ದು, ಬ್ಯಾರೇಜ್ ನಿಂದ ನೀರು
ಸಂಗಮದ ದೇವಸ್ಥಾನದವರೆಗೂ 3ಕಿ.ಮೀ. ದೂರದವರೆಗೂ ನೀರು ನಿಲುಗಡೆಯಾಗಿ ಕೂಡಲಸಂಗಮ
ವನ್ನು ಸುತ್ತುವರೆದು ಪುಣ್ಯಸ್ನಾನ ಮಾಡಲು ಭಕ್ತಾದಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ.

ಆದ್ದರಿಂದ ತಾವುಗಳು ಪ್ರವಾಸೋಧ್ಯಮ ಇಲಾಖೆಯಲ್ಲಿ ಸೇರ್ಪಡೆ ಮಾಡಿ ಅಭಿವೃದ್ಧಿಪಡಿಸಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!