ಗ್ರಾಮೀಣ ಪ್ರದೇಶದ ಕಲಾವಿದರಿಗೆ ಸಿಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೌಲಭ್ಯಗಳು ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಗಂಭೀರ ಆರೋಪ.
ಚಳ್ಳಕೆರೆ:: ಚಿತ್ರದುರ್ಗ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದ ಬಡ ಕಲಾವಿದರಿದ್ದಾರೆ ಉತ್ತಮ ಪ್ರತಿಭೆವುಳ್ಳ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವುದೇ ಕಾರ್ಯಕ್ರಮವನ್ನು ನೀಡದೆ ವಂಚನೆ ಮಾಡುತ್ತಿದೆ ಎಂದು ನಲಗೇತನಹಟ್ಟಿ ಗಾಯಕ ಮುತ್ತುರಾಜ್ ಗಂಭೀರವಾಗಿ ಆರೋಪಿಸಿದ್ದಾರೆ.
ಸೋಮವಾರ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಸರ್ಕಾರ ಗ್ರಾಮೀಣ ಪ್ರದೇಶದ ಕಲಾವಿದರಿಗೆ ಸಾಕಷ್ಟು ಅನುದಾನವನ್ನ ಬಿಡುಗಡೆ ಮಾಡಿದರು ಸಹ ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರ ಜಿಲ್ಲೆಯವರಿಗೆ ಕಾರ್ಯಕ್ರಮ ನೀಡಲು ಅನುದಾನ ಇದೆ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಕಲಾವಿದರಿಗೆ ವಂಚನೆಯನ್ನು ಮಾಡುತ್ತಿದ್ದಾರೆ ಅನೇಕ ಯೋಜನೆಗಳು ದರ್ಶಕರ ಜಯಂತಿ ಕಾರ್ಯಕ್ರಮಗಳು ನಡೆದರೂ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕಮಿಷನ್ ಮುಖಾಂತರ ಆಯ್ದ ಕಲಾವಿದರಿಗೆ ಕೊಡುತ್ತಿರುವುದು ಖಂಡನೆ ಯ ಜಾತಿ ವರ್ಗದ ಮೇಲೆ ಕಾರ್ಯಕ್ರಮ ಕೊಡುತ್ತಿರುವುದು ಕಲೆಗೆ ಮಾಡುವ ದೊಡ್ಡ ಅವಮಾನ.
ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸುಮಾರು ವರ್ಷಗಳಿಂದ ಗ್ರಾಮೀಣ ಭಾಗದ ಕಲಾವಿದರಿಗೆ ಆಗುವ ವಂಚನೆಯನ್ನ ಕೇಳುವವರಿಲ್ಲ ಕೊಡಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಕಲಾವಿದರಿಗೆ ಸರ್ಕಾರ ನೀಡಿರುವ ಕಾರ್ಯಕ್ರಮಗಳ ಸೌಲಭ್ಯವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ