ಚಳ್ಳಕೆರೆ :
ಮಳೆಯಿಂದಾಗಿ ತುಂಬಿ ಹರಿದ ಚರಂಡಿ ರಸ್ತೆಗಳು
ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದಲ್ಲಿ, ರಾತ್ರಿ
ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು, ಚರಂಡಿಗಳು ತುಂಬಿ
ಹರಿಯುತ್ತಿವೆ.
ಗ್ರಾಮದ ಎಲ್ಲಾ ಚರಂಡಿಗಳಲ್ಲಿ ಕಸ ತ್ಯಾಜ್ಯ
ಇರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದಾಗಿ
ಗ್ರಾಮಸ್ಥರು ಆರೋಪಿಸಿದ್ದಾರೆ.
ಜೊತೆಗೆ ಚರಂಡಿಗಳು ಹಾಗೂ
ರಸ್ತೆಗಳಲ್ಲಿ ತುಂಬಿರುವ ಕಸ ತೆಗೆದು ಸ್ವಚ್ಚಗೊಳಿಸಬೇಕು, ಇಲ್ಲದಿದ್ದರೆ
ಕಸ ತೆಗೆಯದಿದ್ದರೆ, ರಸ್ತೆಗಳು ಕಸದಿಂದ ತುಂಬಿ ಹರಿಯುತ್ತೆ
ಎಂದಿದ್ದಾರೆ.