ಚಳ್ಳಕೆರೆ : ದೇವರ ಮರಿಕುಂಟೆ ಗ್ರಾಮದ ಕೆನರಾ ಬ್ಯಾಂಕ್ ವ್ಯವಸ್ಥಾಪಕರ ನಿರ್ಲಕ್ಷ್ಯ ದೋರಣೆಗೆ : ಬ್ಯಾಂಕ್ ಮುಂದೆ ಫಲಾನುಭವಿಗಳ ಧರಣಿ
ಚಳ್ಳಕೆರೆ : ದೇವರು ವರ ಕೊಟ್ಟರು ಪೂಜಾರಿ ವರ ಕೊಡುವುದಿಲ್ಲ ಎಂಬAತೆ ಸರಕಾರ ಬಡವರ ಸಬಲಿಕರಣ ವ್ಯವಸ್ಥೆಗೆ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕ ಸಬಲರನ್ನಾಗಿ ಮಾಡಲು ನಿಗಮ ಮಂಡಳಿಗಳನ್ನು ಮಾಡಿ ಸಬ್ಸಿಡಿಗಳ ಮೂಲಕ ಆಯಾ ಸಮುದಾಯದವರಿಗೆ ಅನುಕೂಲ ಮಾಡಲು ಬ್ಯಾಂಕ್ ಮೂಲಕ ಸೌಲಭ್ಯಗಳನ್ನು ಹೊದಗಿಸುವ ಗುರಿ ಹೊಂದಿದ್ದಾರೆ.
ಆದರೆ ಕೆಲವು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸರಕಾರದ ಯೋಜನೆಗಳು ಹಳ್ಳ ಹಿಡಿಯುವುದರಲ್ಲಿ ಯಾವುದೇ ಅನುಮಾನ ಇಲ್ಲವಾಗಿದೆ.
ಹೌದು ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಕೆನರಾ ಬ್ಯಾಂಕ್ ವ್ಯವಸ್ಥಾಪಕರ ನಿರ್ಲಕ್ಷ್ಯ ದೋರಣೆಗೆ ಇಂದು ಬ್ಯಾಂಕ್ ಮುಂದೆ ಧರಣಿ ನಡೆಸಲಾಗಿದೆ.

ಇನ್ನೂ ಅಂಬೇಡ್ಕರ್ ನಿಗಮದ ಯೋಜನೆಗಳನ್ನು ಪಡೆಯಲು ಫಲಾನುಭವಿಗಳು ಅರ್ಜಿ ಸಲ್ಲಿಸಿ ಆರು ತಿಂಗಳು ಕಳೆದರೂ ಯಾವುದೇ ಅರ್ಜಿ ಯ ಸೌಲಭ್ಯ ಹೊದಗಿಸದೆ ತಡೆ ಹಿಡಿದಿರುವುದನ್ನು ವಿರೋಧಿಸಿ ಧರಣಿ ನಡೆಸಿದ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಮರಿಕುಂಟೆ ಕೆನರಾ ಬ್ಯಾಂಕ್ ವಿರುದ್ಧ ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ರತ್ಮಮ್ಮ, ಓಕಾಂರಮೂರ್ತಿ, ರಂಗಸ್ವಾಮಿ, ಕುಶಾಲ್, ಊರಿನ ಗ್ರಾಮಸ್ಥರು ರೈತ ಮುಖಂಡರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!