ಚಳ್ಳಕೆರೆ :
ಹತ್ತನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಸಂಘದ
ಪ್ರತಿಭಟನೆ
ಹೊಳಲ್ಕೆರೆ ಕ್ಷೇತ್ರದ ಭೀಮಸಮುದ್ರದ ವೇದಾಂತ ಮೈನ್ಸ್ ನವರು,
ಲಾರಿಗಳಿಗೆ ಅದಿರು ತುಂಬಿಸಲು ಲೋಡು ನೀಡುತ್ತಿಲ್ಲವೆಂದು
ವಿರೋಧಿಸಿ, ಲಾರಿ ಮಾಲೀಕರು ನಡೆಸುತ್ತಿರುವ ಧರಣಿ
ಸತ್ಯಾಗ್ರಹವು, ಇಂದಿಗೆ 10 ದಿನಕ್ಕೆ ಕಾಲಿಟ್ಟಿದೆ.
ಸುಮಾರು 2 ಸಾವಿರ
ಕುಟುಂಬಗಳು ಇದನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದು,
ಲೋಡುಗಳು ಸಿಗದೆ, ಜೀವನ ನಿರ್ವಹಣೆ ಸಾಧ್ಯವಿಲ್ಲವಾಗಿದೆ.
ಕೂಡಲೇ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಮಧ್ಯ ಪ್ರವೇಶಿಸಿ,
ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.