ಚಳ್ಳಕೆರೆ :
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.
ನೀರಾವರಿ
ಇಲಾಖೆಯನ್ನು ಕಡೆಗಣನೆ ಮಾಡಿದೆ, ರಾಜ್ಯದಲ್ಲಿ ಪಾರ್ಟ್ ಟೈಮ್
ನೀರಾವರಿ ಮಂತ್ರಿ ಇದ್ದಾರೆಂದು ಸಂಸದ ಗೋವಿಂದ ಕಾರಜೋಳ
ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತನಾಡಿದರು.
ಡಿಕೆಶಿ ಒಂದು ಪಕ್ಷದ ಜವಾಬ್ದಾರಿ, ಇನ್ನೊಂದು
ಇಲಾಖೆ ಮಂತ್ರಿಯಾಗಿದ್ದಾರೆ. ಡ್ಯಾಂ ಸೇಫ್ಟಿ ಕಮಿಟಿ ಸಭೆ ಮಾಡಿ
ಸಲಹೆ ಸೂಚನೆ ಪಡೆಯಬೇಕಿತ್ತು. 13-33ಗೇಟ್ ನೋಡುವ
ಜವಾಬ್ದಾರಿ ರಾಜ್ಯ ಸರ್ಕಾರಕ್ಕಿದೆ ಎಂದರು.