ಚಳ್ಳಕೆರೆ :
ನಿಧಿ ಆಸೆಗಾಗಿ ನಾಗರಕಲ್ಲು ಸ್ಥಳವನ್ನ ವಿರೂಪ ಗೊಳಿಸಿದ
ನಿಧಿಗಳ್ಳರು
ಚಳ್ಳಕೆರೆ
ತಾಲೂಕಿನ ಚನ್ನಮ್ಮ ನಾಗತಿಹಳ್ಳಿ ಗ್ರಾಮದಲ್ಲಿ ಕರಿಯಣ್ಣನ
ಮರಡಿಯಲ್ಲಿ ನಾಗಪ್ಪನ ದೇವಸ್ಥಾನ ವಿದ್ದು ದೇವಾಲಯದಲ್ಲಿ
ಯಾವಾಗಲೂ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು.
ಕಾಡುಗೊಲ್ಲರ ಸಮುದಾಯದವರ ಅರಾದ್ಯ ದೇವರು ಈ ದೇವರು.
ಈ
ಸಮುದಾಯದವರು ಭಕ್ತಿಯಿಂದ ಪೂಜೆ ಮಾಡುವ ನಾಗದೇಗುಲ.
ಆದರೆ ಇಲ್ಲಿ ನಿಧಿ ಇದೆ ಎಂದು
ನಂಬಿಕೊಂಡು ಕಳ್ಳರು, ದೇಗುಲವನ್ನೇ ವಿರೂಪಗೊಳಿಸಿದ್ದಾರೆ.
ದೇವಸ್ಥಾನದಲ್ಲೆಲ್ಲಾ ಅಗೆದು ಹಾಕಿದ್ದಾರೆ. ಹೀಗೆ ದೇವಾಲಯವನ್ನು
ವಿರೂಪಗೊಳಿಸಿರುವುದಕ್ಕೆ ಸಮುದಾಯ ಮುಖಂಡರು ಆತಂಕಗೊಂಡಿದ್ದಾರೆ.