ಎನ್ ದೇವರಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷೆ ಸರಿತಾ ರಾಜನಾಯ್ಕ ಅಧಿಕಾರ ಪದಗ್ರಹಣ.
ನಾಯಕನಹಟ್ಟಿ::ಆಗಸ್ಟ್.12.
ನಾಯಕನಹಟ್ಟಿ ಸಮೀಪದ ಎನ್ ದೇವರಹಳ್ಳಿ ಗ್ರಾ.ಪಂ. ಅಧ್ಯಕ್ಷರ ನಾಲ್ಕನೇ ಅವಧಿಯ ಸರಿತಾ ರಾಜನಾಯ್ಕ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು.
ಇದೆ ವೇಳೆ ಮಾತನಾಡಿ ಅವರು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಅದೇ ರೀತಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ವಿದ್ಯುತ್ ಸ್ವಚ್ಛತೆ ಸೇರಿದಂತೆ ಗ್ರಾ.ಪಂ. ಸರ್ವ ಸದಸ್ಯರ ಸಹಕಾರದೊಂದಿಗೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆಯನ್ನು ನೀಡಿದರು.
.
ಇನ್ನೂ ಗ್ರಾಮ ಪಂಚಾಯತಿ ಸದಸ್ಯ ಟಿ. ಕಾಟಯ್ಯ, ಮಾತನಾಡಿದರು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸರಿತಾ ರಾಜನಾಯ್ಕ ಅಧಿಕಾರವನ್ನು ವಹಿಸಿಕೊಂಡಿದ್ದಾರೆ ಸರ್ವ ಸದಸ್ಯರ ಸಹಕಾರದೊಂದಿಗೆ ಉತ್ತಮ ಆಡಳಿತವನ್ನು ನಡೆಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಎಸ್ ಸಿದ್ದಪ್ಪ, ಆರ್ ಬಸವರಾಜ್, ಟಿ. ಕಾಟಯ್ಯ, ಗುರುಮೂರ್ತಿ, ಶ್ರೀಮತಿ ಡಿ.ಪಿ. ಸೂರಮ್ಮ, ಶ್ರೀಮತಿ ಅಕ್ಕಮ್ಮ ಶ್ರೀಮತಿ ಕೃಷ್ಣವೇಣಿ ರಾಜು, ಹಾಗೂ ಕಾಂಗ್ರೆಸ್ ಮುಖಂಡರಾದ ಕೆಜಿ ಪ್ರಕಾಶ್ ಕುದಾಪುರ ಟಿ.ರಾಜಣ್ಣ ಎನ್ ದೇವರಹಳ್ಳಿ ಪಿಡಿಒ ಕೆ.ಒ. ಶಶಿಕಲಾ, ಕಾರ್ಯದರ್ಶಿ ಎಸ್.ಆರ್ .ಚಿದಾನಂದ, ವಿಶ್ವನಾಥ್, ಬಿಲ್ ಕಲೆಕ್ಟರ್ ಎಂ.ಬಿ. ರಘು, ಕಂಪ್ಯೂಟರ್ ಆಪರೇಟರ್ ಪಿ.ಕಮಲಮ್ಮ, ಇಂಜಿನಿಯರ್ ಎಸ್. ಮೇಘ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು