ಆಗಸ್ಟ್ 14ರಂದು ಬುಧವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿ ಆವರಣದಲ್ಲಿ ಹಲಗಲಿ ಬೇಡರ ಕೊಡುಗೆ ವಿಚಾರ ಸಂಕಿರಣ ಕಾರ್ಯಕ್ರಮ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು

ನಾಯಕನಹಟ್ಟಿ::
ಆಗಸ್ಟ್ 14ರಂದು ಪಟ್ಟಣದಲ್ಲಿ ಹಲಗಲಿ ಬೇಡರ ಕೊಡುಗೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹೋಬಳಿಯ ನಾಯಕ ಸಮುದಾಯದ ಮುಖಂಡರು ಯುವಕರು ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹಟ್ಟಿ ಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಹೇಳಿದರು.

ಸೋಮವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಚೇರಿಯಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲಗಲಿ ಬೇಡರ ಕೊಡುಗೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ ಸಂಗ್ರಮದಲ್ಲಿ ಶೂರ ಪರಾಕ್ರಮಿಗಳಾದ ಹಲಗಲಿ ಬೇಡರ ಕೊಡುಗೆ ಅಪಾರ ಇಡೀ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬುಧವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿ ಆವರಣದಲ್ಲಿ ಹಲಗಲಿ ಬೇಡರ ಕೊಡುಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಹೋಬಳಿಯ ಎಲ್ಲಾ ನಾಯಕ ಸಮುದಾಯದ ಮುಖಂಡರು ಯುವಕರು ಮಹಿಳೆಯರು ಮತ್ತು ಮಹಿಳಾ ಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕೆಂದು ಮನವಿಯನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ನಿರ್ದೇಶಕರಾದ ಎಸ್ ಓಬಯ್ಯ, ನೇರಲಗುಂಟೆ ಭೈಯಣ್ಣ, ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ಎಂ.ಚಿನ್ನಯ್ಯ, ಹನುಮಣ್ಣ, ಕಾಕಸೂರಯ್ಯ, ಸದಸ್ಯರಾದ ಜಿ.ಬಿ. ಮುದಿಯಪ್ಪ, ಬೋರಸ್ವಾಮಿ, ಟಿ. ಬಸಪ್ಪ ನಾಯಕ, ಏಜೆಂಟ್ರು ಪಾಲಯ್ಯ, ಗುಂತಕೋಲಮ್ಮನಹಳ್ಳಿ ಎಂ.ಪಾಪಣ್ಣ, ಶಿಕ್ಷಕ ಜಿ.ಎಂ. ಜಯಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ, ಜಿ.ಕೆ. ಹಳ್ಳಿ ಕೆ.ಟಿ. ಮಲ್ಲಿಕಾರ್ಜುನ್,ಎಸ್ ಶಿವತಿಪ್ಪೇಸ್ವಾಮಿ, ಚೌಳಕೆರೆ ಶಿವರಾಜ್ ಇದ್ದರು.

About The Author

Namma Challakere Local News
error: Content is protected !!