ಪುರಾತನ ಕಾಲದ ಬಸವಣ್ಣನಮೂರ್ತಿ ನೂತನ ಈಶ್ವರನ ದೇವಸ್ಥಾನಕ್ಕೆ ಸ್ಥಳಾಂತರಿಸಿದ ಎನ್ ದೇವರಹಳ್ಳಿ ಗ್ರಾಮಸ್ಥರು. ಎಚ್ ನಾಗರಾಜ್.
ನಾಯಕನಹಟ್ಟಿ:: ಆಗಸ್ಟ್12.
ಎನ್ ದೇವರಹಳ್ಳಿ ಗ್ರಾಮಸ್ಥರು ಪುರಾತನ ಕಾಲದ ಬಸವಣ್ಣನ ವಿಗ್ರಹವನ್ನು ಈಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮುಖಂಡ ಎಚ್ ನಾಗರಾಜ್ ಹೇಳಿದ್ದಾರೆ.
ಸೋಮವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಈಶ್ವರ ದೇವಸ್ಥಾನಕ್ಕೆ ಬಸವಣ್ಣನ ಮೂರ್ತಿ ವಿಗ್ರಹವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳಾಂತರಿಸಿ ಮಾತನಾಡಿದರು ಎನ್ ದೇವರಹಳ್ಳಿ ಗ್ರಾಮ ಮೊದಲು ಹಳದ ಪಕ್ಕದಲ್ಲಿ ಇತ್ತು. ಹಳ್ಳದಲ್ಲಿ ಹೆಚ್ಚು ನೀರು ಜಾಸ್ತಿ ಹರಿಯುವದರಿಂದ ಗ್ರಾಮಸ್ಥರು ಈ ಪ್ರದೇಶಕ್ಕೆ ಒಲಸೆ ಬರುತ್ತಾರೆ.
ಗ್ರಾಮಸ್ಥರು ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಚಿಕ್ಕದಾದ ಈಶ್ವರನ ದೇವಸ್ಥಾನವನ್ನು ಪ್ರತಿಷ್ಠಾಪಿಸಿ ಅಂದಿನಿಂದ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು.
ನೂತನ ಈಶ್ವರನ ದೇವಸ್ಥಾನಕ್ಕೆ ಬಸವಣ್ಣನ ಮೂರ್ತಿ ಇಲ್ಲವೆಂಬ ಕೊರಗು ಗ್ರಾಮಸ್ಥರಲ್ಲಿ ಕಾಡುತ್ತಿತ್ತು ಇಂದು ಪುರಾತನ ಕಾಲದ ಬಸವಣ್ಣನ ವಿಗ್ರಹವನ್ನು ಈಶ್ವರನ ದೇವಸ್ಥಾನಕ್ಕೆ ಸ್ಥಳಾಂತರಿಸಿ ಶುಭ ಸೋಮವಾರದಿಂದು ಗ್ರಾಮಸ್ಥರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದರು.
ಇನ್ನೂ ಬಂದಂತ ಭಕ್ತಾದಿಗಳಿಗೆ ಮೊಸರ ಅನ್ನ ಪ್ರಸಾದವನ್ನು ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಸಂತೋಷ್ ವಿತರಿಸಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ರಾಜನಾಯ್ಕ, ಸದಸ್ಯರಾದ ಆರ್ ಬಸವರಾಜ್, ಎಸ್ ಸಿದ್ದಪ್ಪ, ಗ್ರಾಮದ ಮುಖಂಡ ಛೇರ್ಮನ್ ತಿಪ್ಪೇಸ್ವಾಮಿ, ದಿವಾಕರ್ ರೆಡ್ಡಿ, ಸಂತೋಷ್, ಲೋಕೇಶ್, ಹಾಲಿನ ಡೈರಿ ಮಲ್ಲಿಕಾರ್ಜುನ್, ಅಂಜಿನಪ್ಪ, ನಿರಂಜನ್, ಶಿಕ್ಷಕ ಪಾಲಯ್ಯ ಚಂದ್ರಣ್ಣ, ಸೇರಿದಂತೆ ಎನ್ ದೇವರಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು.