ಚಳ್ಳಕೆರೆ : ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಪ್ರಯುಕ್ತ ನಗರದ ಶಾಸಕರ ಭವನದಲ್ಲಿ ಭಾವ ಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವುದರ ಮೂಲಕ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸ್ಮರಿಸಿ ನಂತರ ಮಾತನಾಡಿದರು
ದೇಶದ ಐಕ್ಯತೆಗಾಗಿ ಹೋರಾಡಿದ ಮಹಾ ನಾಯಕರು, ಕಾಂಗ್ರೆಸ್ ಪಕ್ಷದ ನಾಯಕ್ವತವನ್ನು ವಹಿಸಿಕೊಂಡ ಇವರುಗಳು ಉಸಿರಿರುವರೆಗೆ ದೇಶದ ಐಕ್ಯತೆಗಾಗಿ ದುಡಿದವರು, ಅವರು ದೇಶದ ಕೋಮು ಸೌರ್ದತೆಯನ್ನು ಕಾಪಾಡುವ ಮೂಲಕ ದೇಶದ ಐಕ್ಯತೆಗಾಗಿ ಮಡಿದವರು ಎಂದು ಸ್ಮರಿಸಿದರು.
ವಿಶ್ವಕರ್ಮ ಸಮುದಾಯದ ರಾಜ್ಯಧ್ಯಕ್ಷ
ಆರ್.ಪ್ರಸನ್ನ ಕುಮಾರ್ ಮಾತನಾಡಿ, ಈಡೀ ವಿಶ್ವಕ್ಕೆ ತಂತ್ರಜ್ಞಾನ ತೋರಿಸಿಕೊಟ್ಟ ಮಹಾನ್ ವ್ಯಕ್ತಿ, ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ
ಚಳ್ಳಕೆರೆ ನಗರದಲ್ಲಿ ನೆಹರು ವೃತ್ತ ಇದಕ್ಕೆ ಪೂರಕವಾಗಿ ಅವರು ಬಂದು ಹೊಗಿರುವ ನೆನಪಿಗಾಗಿ ಇಂದಿರಾಗಾಂಧಿ ಕಟ್ಟೆ, ನಿರ್ಮಾಣ ಮಾಡಲಾಗಿದೆ ಎಂದು ಸ್ಮರಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಸೈಯದ್ ಮಾತನಾಡಿ, ದೇಶದಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ತರುವುದರ ಮೂಲಕ ಇಂದಿಗ ಜನಮಾಸದಲಿ ಉಳಿದಿದ್ದಾರೆ. ಐಟಿಬಿಟಿ ಯೋಜನೆ, ಪಂಚಾಯತಿ ರಾಜ್ ಯೋಜನೆಗಳ ಮೂಲಕ ಹೊಸ ಚಾಪು ಮೂಡಿಸಿದ್ದರು ಎಂದರು.
ನಗರಸಭೆ ಸದಸ್ಯ ವೀರಭದ್ರಯ್ಯ ಮಾತನಾಡಿದರು
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್ ಗೌಡ, ವೀರಭದ್ರಯ್ಯ, ಡಿಕೆ.ಕಾಟಯ್ಯ, ಪಾಪಣ್ಣ, ಸೈಯದ್, ತಿಪ್ಪೇಸ್ವಾಮಿ, ಗಿರಿಯಪ್ಪ, ಆರ್.ಪ್ರಸನ್ನಕುಮಾರ್, ಚೌಳೂರು ಪ್ರಕಾಶ್, ಇತರರ ಮುಖಂಡರು ಪಾಲ್ಗೊಂಡಿದ್ದರು.