ಚಳ್ಳಕೆರೆ :
ಸ್ವಚ್ಚತೆಗೆ ಹಾಗೂ ಸಾರ್ವಜನಿಕರು ರಕ್ಷಣೆಗೆ ಸದಾ ಮುಂದಾಗಿರುವ ಗ್ರಾಮ ಪಂಚಾಯತಿ ಅಧಿಕಾರಿಗಳು ಯಾಕೋ ಇತ್ತ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಹೊಸ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿವೆ.
ಇದರಿಂದ ಗ್ರಾಮದಲ್ಲಿ ಡೆಂಗ್ಯೂ ಹರಡುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ.
ಇದರಿಂದ ಶಾಲಾ ಮಕ್ಕಳು ವಯೋ ವೃದ್ದರು ಕೊಳಚೆ ನೀರು ದಾಟಿಕೊಂಡು ದಿನನಿತ್ಯ ಓಡಾಡುವ ಪರಿಸ್ಥಿತಿ ಬಂದಿದೆ.
ಇನ್ನಾದರೂ ಮೌನವಹಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳು ಗ್ರಾಮಕ್ಕೆ ಮೂಲಭೂತ ಸೌಲಭ್ಯವನ್ನು ಹೊದಗಿಸುವರೋ ಕಾದು ನೋಡಬೇಕಿದೆ..