ಎನ್.ದೇವರಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಸರಿತಾ ಬಾಯಿ ರಾಜನಾಯ್ಕ

ನಾಯಕನಹಟ್ಟಿ:: ಆಗಸ್ಟ್ 8.

ನಾಯಕನಹಟ್ಟಿ ಸಮೀಪದ ಎನ್. ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ . ಸರಿತಾ ಬಾಯಿ ರಾಜನಾಯ್ಕ ಆಯ್ಕೆ.

ಗುರುವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದು.
ಚುನಾವಣೆಗೆ ರಾಯಮ್ಮ, ಮತ್ತು ಸರಿತಾ ಬಾಯಿ ರಾಜನಾಯ್ಕ ನಾಮಪತ್ರವನ್ನು ಸಲ್ಲಿಸಿದರು.

ಗ್ರಾಮ ಪಂಚಾಯತಿ ಒಟ್ಟು ಸದಸ್ಯರ ಸಂಖ್ಯೆ 14.

ಚುನಾವಣೆಯಲ್ಲಿ ರಾಯಮ್ಮ 6. ಮತಗಳನ್ನು ಪಡೆದು ಪರಾಭವ ಗೊಂಡರು.

ಸರಿತಾ ಬಾಯಿ ರಾಜನಾಯ್ಕ 8. ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆ. ಎಸ್ .ಸುರೇಶ್ ತಿಳಿಸಿದ್ದಾರೆ.

ಇನ್ನೂ ನೂತನ ಅಧ್ಯಕ್ಷೆ ಸರಿತಾಬಾಯಿ ರಾಜನಾಯ್ಕ ರವರಿಗೆ ಮುಖಂಡರು ಅಭಿಮಾನಿಗಳು ಕುಟುಂಬಸ್ಥರು ಹೂ.ಮಾಲೆ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭುಸ್ವಾಮಿ, ಬಂಡೆ ಕಪಿಲೆ ಓಬಣ್ಣ, ವಕೀಲ ಉಮಾಪತಿ, ಭೀಮನಕೆರೆ ಪಾಲಯ್ಯ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ವರವು ಶಂಕರ್ ಮೂರ್ತಿ ,ಕುದಾಪುರ ಕೆ.ಜಿ. ಪ್ರಕಾಶ್, ಶ್ರೀನಿವಾಸ್, ಎನ್ . ದೇವರಹಳ್ಳಿ ನಾಗರಾಜ್, ಲೋಕೇಶ್ ,ಕೋಡಿಹಳ್ಳಿ ಜಿ.ಎಸ್. ತಿಪ್ಪೇಸ್ವಾಮಿ, ಟಿ. ರಾಜಣ್ಣ, ತಿಮ್ಮಪ್ಪನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ರಾಮಸಾಗರ ಎಂ. ತಿಪ್ಪೇಸ್ವಾಮಿ, ಜಂಬಯ್ಯನಹಟ್ಟಿ ರವಿಕುಮಾರ್, ಚಂದ್ರ ನಾಯ್ಕ ಲೋಕ ನಾಯ್ಕ, ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ. ಸದಸ್ಯರಾದ ಎಸ್ . ಸಿದ್ದಪ್ಪ, ಆರ್ ಬಸವರಾಜ್,ಟಿ ಕಾಟಯ್ಯ,, ಡಿ ಪಿ. ಸೂರಮ್ಮ ಶಂಕರ್ ಮೂರ್ತಿ, ಅಕ್ಕಮ್ಮ ರಾಜಣ್ಣ, ಎಲ್. ಕೃಷ್ಣವೇಣಿ ರಾಜು, ಗುರುಮೂರ್ತಿ,
ಇನ್ನೂ ಭೀಮನಕೆರೆ ಸುರೇಂದ್ರ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್. ಹಾಗೂ ಸಿಬ್ಬಂದಿ ಪಿಡಿಒ ಕೆ.ಒ.ಶಶಿಕಲಾ,ಡಿಇಒ ಪಿ. ಕಮಲಮ್ಮ, ಬಿಲ್ ಕಲೆಕ್ಟರ್ ಎಂ.ಬಿ. ರಘು, ಕಾರ್ಯದರ್ಶಿ ಎಸ್ ಆರ್ ಚಿದಾನಂದ, ದ್ವಿತೀಯ ದರ್ಜೆ ಸಹಾಯಕ ವಿಶ್ವನಾಥ್. ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಎನ್ ದೇವರಹಳ್ಳಿ ಸಮಸ್ತ ಗ್ರಾಮಸ್ಥರು,

About The Author

Namma Challakere Local News
error: Content is protected !!