ಚಳ್ಳಕೆರೆ :

ಕೆಎಸ್ಆರ್ಟಿಸಿ ಬಸ್ ಪಂಚರ್ ಪ್ರಯಾಣಿಕರ ಪರದಾಟ

ಹೌದು ಕೆ ಎಸ್ ಆರ್ ಟಿ ಸಿ ಬಸ್ ಪಂಚರ್ ಹಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿತ್ತು.

ಚಳ್ಳಕೆರೆ ತಾಲೂಕಿನ ಬಂಜಿಗೆರೆ ಮಾರ್ಗದ ಬಸ್ ಚಳ್ಳಕೆರೆ ಯಿಂದ ಬಂಜಿಗೆರೆಗೆ ಪ್ರಯಾಣಿಕರನ್ನು ಹೊತ್ತು ಚಲಿಸುವಾಗ ತಳಕು ಕೆರೆ ಸಮೀಪದಲ್ಲಿ ಬಸ್ ನ ಮುಂದಿನ ಟಯರ್ ಪಂಚರ್ ಹಾಗಿದೆ.

ಆದರೆ ಬಸ್ ನಲ್ಲಿ ಬಿಡಿಗಾಲಿ (ಹೆಚ್ಚಿನ ಚಕ್ರ) ಟೈರ್ ವ್ಯವಸ್ಥೆ ಇಲ್ಲದೆ ಬಸ್ ಡ್ರೈವರ್ ಹಾಗೂ ನಿರ್ವಾಹಕರು ಪ್ರಯಾಣಿಕರ ಎದುರು ಅಸಯಾಹಕತೆ ತೋರುವುದು ಕಂಡು ಬಂದಿತು.

ಇನ್ನೂ‌ ಮುಂಜಾನೇಯೇ ಶಾಲಾ ಕಾಲೇಜುಗಳಿಗೆ ಇನ್ನು ಶಾಲಾ ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಹರಸಿ ಬಂದ ಮಹಿಳೆಯರು ರಾಜ್ಯ‌ಸರಕಾರದ ಶಕ್ತಿಯೋಜನೆ ನಂಬಿ ಹಣವನ್ನು ತರದೆ ಕೇವಲ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಬಂದ ಮಹಿಳೆಯರ ಪಾಡ ಹೇಳತಿರದು.

ಹೀಗೆ ಪ್ರಯಾಣಿಕರು ಪರದಾಡುವ ದೃಶ್ಯ ಸಹ ಪ್ರಯಾಣಿಕರು ವಿಡಿಯೋ ಮಾಡಿ ಸೊಶೀಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದಾರೆ.

ಇನ್ನೂ ಅವ್ಯವಸ್ಥೆಯ ಕೆ‌ಎಸ್ ಆರ್ ಟಿ ಬಸ್ ವ್ಯವಸ್ಥೆ ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!