ಚಳ್ಳಕೆರೆ :
ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ತಾಲೂಕಿನ ಗಂಜಿಗುಂಟೆ ಗ್ರಾಮದ ವಸತಿ ನಿರಾಶ್ರಿತ ದಲಿತರು ಧರಣಿ ನಡೆಸಿದರು.
ಅವರು ನಗರದ ತಾಲ್ಲೂಕು ಕಛೇರಿ ಮುಂಭಾಗ ಅನಿರ್ದಿಷ್ಟ ಧರಣಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ನಾಳಿದ ಸರ್ಕಾರಗಳು ಈ ಜನಾಂಗಕ್ಕೆ |
ಸಾಮಾಜಿಕ -ಆರ್ಥಿಕ- ರಾಜಕೀಯ ಸಮಾನತೆ ತರುವಲ್ಲಿ ವಿಫಲವಾಗಿರುವುದು ಖರೇಯ ಸಂಗತಿ, ಕರ್ನಾಟಕದ ಬಹುತೇಕ
| ಗ್ರಾಮಾಂತರ ಪ್ರದೇಶಗಳಲ್ಲಿ ನಾಗರೀಕನಿಗೆ ಸರ್ಕಾರ ಒದಗಿಸಬಹುದಾದ ಮೂಲಭೂತ ಸೌಕರ್ಯಗಳಲ್ಲಿ ಅಗತ್ಯವಿರುವುದು |
ನಿವೇಶನ, ಅಂದರೆ ವಾಸಮಾಡುವುದಕ್ಕೆ ಸ್ವಂತ ಮನೆ, ಇದನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಸಂವಿಧಾನ ಈ
ಜವಾಬ್ದಾರಿಯನ್ನು ಸರ್ಕಾರಕ್ಕೆ ನಿರ್ದೇಶನ ಮಾಡಿರುತ್ತದೆ.
ಆದರೂ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮಾದಿಗ ಸಮುದಾಯದ ನಾಗರಿಕನಿಗೆ ವಾಸದ ಮನೆ ಇಲ್ಲಿಯವರೆಗೆ
ಸಿಗದಿರುವುದು ದುರಂತ, ಇದಕ್ಕೆ ಪೂರಕ ಉದಾಹರಣೆ ವೆಂಬಂತೆ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿಯ ಗಂಜಿಗುಂಟೆ ಗ್ರಾಮ.
ಇಲ್ಲಿ ವಾಸಿಸುವ ಅದರಲ್ಲೂ ಗ್ರಾಮದ ಸ್ಥಳೀಕರಾದ ಬಹುತೇಕ ಮಾದಿಗ ಬಂಧುಗಳಿಗೆ ಸ್ವಂತಹದ್ದು ನಿವೇಶನವಿಲ್ಲ,
ಇದರ ಜೊತೆಗೆ
ಅವಿಭಕ್ತ ಕುಟುಂಬಗಳು ಬೇರೆ 2016-17 ರಲ್ಲಿ ಅಂದಿನ ಸರ್ಕಾರ ಆಶ್ರಯ ಯೋಜನೆ ವಸತಿಗಾಗಿ ಸರ್ಕಾರಿ ಗೋಮಾಳ ಸರ್ವೆ
ನಂ 105 ರಲ್ಲಿ ಸುಮಾರು ಐದು (5) ಎಕರೆ ಜಾಗವನ್ನು ಮೀಸಲು ಇಟ್ಟಿರುವುದು ಆದರೆ ಈ ಜಾಗದಲ್ಲಿ ಸಮಾಜಿಕ-ಆರ್ಥಿಕ-
ರಾಜಕೀಯವಾಗಿ ಬಲಾಡ್ಯವಾಗಿರುವ ಸವರ್ಣಿಯರು ಈ ಜಾಗದಲ್ಲಿ 1/2 ಎಕರೆ ಮತ್ತು 1 ಎಕರೆ ಬಣವೆಗಾಗಿ ಜಾಗವನ್ನು
ಹಿಡಿದುಕೊಂಡು ಈಗ ಇದೇ ಜಾಗದಲ್ಲಿ ಆಕ್ರಮವಾಗಿ ನಿವೇಶನ ಕಟ್ಟುತ್ತಿರುವರು, ಮಾದಿಗ ಬಂಧುಗಳು ನಿವೇಶನಕ್ಕಾಗಿ ಜಾಗ
ಕೇಳಿದರೆ ಜಗಳ -ದೊಂಬಿ ಗಲಾಟೆಗಳು ಇವರನ್ನು ತಮ್ಮದೇ ಆದ ಹಿಕತ್ಗಳಿಂದ ಭಯಗೊಳಿಸುತ್ತಿರುವರು.
ಇಂತಹ ಅಕ್ರಮ ನಿರ್ಮಾಣಕ್ಕೆ
ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಗಳು ತೆರೆಯಮರೆಯಲ್ಲಿ ಬೆಂಬಲ ನೀಡುತ್ತಿರುವವರು, ವಿಶೇಷವೆಂದರೆ ಹಾಲಿ ಈ ಜಾಗವನ್ನು
ನಿವೇಶನದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಈಗಾಗಲೇ ಸ್ವಂತ ನಿವೇಶನಗಳಿರುವುದು ವಾಸ್ತವ ಸತ್ಯ.
ಈ ವಿಷಯವಾಗಿ ಹಾಲಿ ಶಾಸಕರಾದ ಟಿ. ರಘುಮೂರ್ತಿಯವರಿಗೆ ಹಾಗೂ ಲೋಕಸಭಾ ಸದಸ್ಯರುಗಳಿಗೆ 10
ವರ್ಷಗಳಿಂದಲೂ ಮನವಿ ಮತ್ತು ಸದರಿ ವಿಚಾರವನ್ನು ಗಮನಕ್ಕೆ ತರಲಾಗಿದೆ, ಆದರೂ ಯಾವುದೇ ಪ್ರಯೋಜನವಾಗಿಲ್ಲ
ಅಲ್ಲದೇ ಸಂಬಂಧಿಸಿದ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕ್ಕೆ ಅಂದರೆ ಡಿ.ಸಿ, ಸಿ.ಎಸ್. ತಹಶೀಲ್ದಾರರು, ಕಾರ್ಯನಿರ್ವಾಹಕ
ಅಧಿಕಾರಿಗಳು ಮತ್ತು ಸಿ.ಓ ಗಮನಕ್ಕೆ ತಂದರೂ ಫಲಿತಾಂಶ ಶೂನ್ಯ.
ಆದ್ದರಿಂದ ಗಂಜಿಗುಂಟೆ ಗ್ರಾಮದ ಮಾದಿಗ ನಿವೇಶನ ರಹಿತ ನಾಗರೀಕರಿಗೆ ನಿವೇಶನ ನೀಡಲು ಸರ್ಕಾರದ ಶಾಸಕರ
ಅಧಿಕಾರಿಗಳ ಗಮನಕ್ಕೆ ತರಲು ಅಹಿಂಸತ್ಮಾಕ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಮಾಡಲಾಗುತ್ತದೆ ಎಂದು ಧರಣಿ ನಿರತ ಮುಖಂಡ ಸೋಮಲಿಂಗಪ್ಪ, ನಿಜಲಿಂಗಪ್ಪ, ರಂಗನಾಥ, ನಿಂಗಪ್ಪ, ದೇವಿರಮ್ಮ, ಕರಿಯಮ್ಮ, ಕಮಲಮ್ಮ ಆಕ್ರೋಶ ವ್ಯಕ್ತಪಡಿಸಿದರು.