ಚಳ್ಳಕೆರೆ :
ಮಳೆಯನ್ನು ಲೆಕ್ಕಿಸದೇ ಕಾಮಗಾರಿ ವೀಕ್ಷಣೆ ಮಾಡಿದ ಸಿ.ಇ.ಓ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಚಳ್ಳಕೆರೆ ತಾಲ್ಲೂಕಿನ ಹೀರೆಹಳ್ಳಿ ಹಾಗೂ ತಳಕು ಗ್ರಾಮಪಂಚಾಯಿತಿ ಗಳಿಗೆ ಭೇಟಿ ನೀಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಡತಗಳನ್ನು ಹಾಗೂ ಕಾಮಗಾರಿ ಗಳನ್ನು ಪರಿಶೀಲನೆ ನಡೆಸಿದರು.
ಸುಮಾರು 130 ಕೆಲಸ ನಿರ್ವಹಿಸುವ
ಕೂಲಿಕಾರರಿಗೆ ಅಯೋಜಿಸಿದ್ದ ಅರೋಗ್ಯ ಶಿಬಿರದಲ್ಲಿ ಭಾಗವಹಿಸಿ,ಕೂಲಿಕಾರರು ಡೆಂಗ್ಯೂ ಇತರೆ ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಿ, ಆರೋಗ್ಯದ ಜೊತೆಗೆ ಸ್ಚಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಸಲಹೆ ನೀಡಿದರು.
ಕಾಮಗಾರಿ ನಿರ್ವಹಿಸುವ ಸ್ಥಳದಲ್ಲಿ ಮಳೆಯನ್ನೇ ಲೆಕ್ಕಿಸದೇ ಕೂಲಿಕಾರರೊಂದಿಗೆ ಸಂವಾದ ನಡೆಸಿ ,ಕೆಲಸದಲ್ಲಿ ಜಾಬ್ ಕಾರ್ಡ್ ಹೊಂದಿದ ಪ್ರತಿಯೊಬ್ಬರು ಕೆಲಸ ನಿರ್ವಹಿಸಿ, ಆರ್ಥಿಕವಾಗಿ ಸದೃಡರಾಗುವಂತೆ ಹಾಗೂ ಹೆಚ್ಚು ಹೆಚ್ಚು ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ನೀರು ಸಂರಕ್ಷಣಾ ಕಾಮಗಾರಿಗಳಾದ ಕೃಷಿಹೊಂಡ,ಬದು ನಿರ್ಮಾಣ, ಒಣ ಕಲ್ಲುತಡೆ ಹಾಗೂ ದಾಳಿಂಬೆ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಈ ಸಮಯದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು(ನರೇಗಾ), ಸಂತೋಷ್, ಜಿಲ್ಲಾ ಪಂಚಾಯಿತಿಯ ಎ.ಡಿ.ಪಿ.ಸಿ ,ತಾಲ್ಲೂಕು ಐ.ಇ.ಸಿ,ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಹಾಯಕರು, ಭಿ.ಎಫ್.ಟಿ.ಜಿ.ಕೆ.ಎಂ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.