ನಾಯಕನಹಟ್ಟಿ ಆ.6. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಅನ್ನ ದಾಸೋಹಕ್ಕಾಗಿ ದೇವಸ್ಥಾನ ಸಮಿತಿಂದ ಮಸಾಲೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಹೌದು ಇದು ನಾಯಕನಹಟ್ಟಿ ಪಟ್ಟಣದ ಪುಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಮಾಡಿದಷ್ಟು ನೀಡಿ ಬಿಕ್ಷೆ ಶ್ರೀಗುರುತಿಪ್ಪೇಸ್ವಾಮಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಸ್ವಾಮಿ ದರ್ಶನ ಪಡೆದು ಹಸಿವಿನಿಂದ ಹೋಗಬಾರದು ಎಂದ ಉದ್ದೇಶದಿಂದ ಶ್ರಾವಣ ಮಾಸದಲ್ಲಿ ಭಕ್ತರಿಗೆ ದಾಸೋಹ ಮಾಡಲು ಟನ್ ಗಟ್ಟಲೆ ಮಸಾಲೆ ಪುಡಿ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಸಾವಿರು ಜನರಿಗೆ ಸಾಂಬರ್ ತಯಾರಿಸಲು ಅಂಗಡಿಯಿಂದ ಖರೀದಿಸುತ್ತಿದ್ದ ಕಾರದ ಪುಡಿ ‌.ಮಸಾಲೆ ಪುಡಿಯಿಂದ ತಯಾರು ಮಾಡುತ್ತಿದ್ದ ಊಟದಲ್ಲಿ ರುಚಿ ಹಾಗೂ ಶುಚಿಯ ಇರುವುದಿಲ್ಲ ಆದ್ದರಿಂದ ಪ್ರತಿ ವರ್ಷ ದೇವಸ್ಥಾನದವತಿಯಿಂದಲೇ ಗುಣ ಮಟ್ಟದ ಮಸಾಲೆ ಪುಡಿಯನ್ನು ತಯಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ದೇವಸ್ಥಾನದಲ್ಲಿ ಯಾರಾದರೂ ಭಕ್ತರು ಬಂದು ದಾಸೋಹ ಮಾಡಿಸಿದೆ ಅವಕಾಶ ನೀಡಲಾಗುವುದು ಯಾರು ಮುಂದೆ ಬರದಿದ್ದರೆ ದೇವಸ್ಥಾನದಿಂದಲೇ ಅಡುಗೆ ತಯಾರಿಸಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಎಚ್. ಗಂಗಾಧರಪ್ಪ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಪ್ರಕಾಶ್, ಶಂಕರ್, ಮಂಜುನಾಥ್ ,ರುದ್ರೇಶ್, ಮಹದೇವ, ಶಿವಣ್ಣ, ಶಿವರಾಜ್, ಎನ್‌.ಟಿ .ತಿಪ್ಪೇಸ್ವಾಮಿ, ತಿಪ್ಪೇಶ್, ದುರುಗೇಶ್, ದೇವರಾಜ್, ಇದ್ದರು

About The Author

Namma Challakere Local News
error: Content is protected !!