ಪಟ್ಟಣ ಪಂಚಾಯತಿ ನೂತನ ಮುಖ್ಯಧಿಕಾರಿ ಓ. ಶ್ರೀನಿವಾಸ್ ರವರಿಗೆ ಸನ್ಮಾನ.
ನಾಯಕನಹಟ್ಟಿ:: ಆಗಸ್ಟ್ 6. ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ.ಶ್ರೀನಿವಾಸ್ ರವರಿಗೆ ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರಿಂದ ಸನ್ಮಾನ.
ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ. ಶ್ರೀನಿವಾಸ್ ರವರಿಗೆ ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರು ಶಾಲು ಹೂ. ಮಾಲೆ ಹಾಕಿ ಸನ್ಮಾನಿಸಿ ಅಭಿನಂದಿಸಿದರು.
ಇದೇ ವೇಳೆ ಚೌಳಕೆರೆ ಗ್ರಾಮದ ಡಿ.ಬಿ ಕರಿಬಸಪ್ಪ ಮಾತನಾಡಿದರು ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಪುಣ್ಯದ ಕೆಲಸ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾಣಿಯಂತೆ ಇಲ್ಲಿ ಮಾಡಿದಷ್ಟು ನೀಡು ಭಿಕ್ಷೆ ಎನ್ನುವಂತೆ ಕಾಯಕವೇ ಕೈಲಾಸ ಎಂದು ದುಡಿದವರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದ ಸದಾ ಕಾಲ ಇರುತ್ತೆ . ಮುಖ್ಯ ಅಧಿಕಾರಿ ಓ. ಶ್ರೀನಿವಾಸ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಹೆಚ್ಚಿನದಾಗಿ ಅಭಿವೃದ್ಧಿ ಕೆಲಸಗಳು ಮಾಡಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಗುಂತಕೋಲಮ್ಮನಹಳ್ಳಿ ಕೆ.ಟಿ. ಮಲ್ಲಿಕಾರ್ಜುನ್, ಗೌಡಗೆರೆ ಗೌಡ್ರು ರಂಗಪ್ಪ, ಮಲ್ಲೂರಹಳ್ಳಿ ತಿಪ್ಪಯ್ಯ, ಗುಂತುಕೋಲಮ್ಮನಹಳ್ಳಿ ಬೂಟ್ ತಿಪ್ಪೇಸ್ವಾಮಿ, ಕಾವಲು ಬಸವೇಶ್ವರ ನಗರ ಬೋರಣ್ಣ,ಚೌಳಕೆರೆ ಶಿವರಾಜ್, ಇದ್ದರು