ಚಳ್ಳಕೆರೆ :
ಜಲ್ಲಿ ಕ್ರಷರ್ ನಲ್ಲಿ ಕಾರ್ಮಿಕ ಸಾವು
ಜಲ್ಲಿ ಕ್ರಷರ್ ನಲ್ಲಿ ಡ್ರಿಲ್ಲಿಂಗ್ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ
ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೆಹಟ್ಟಿ ಗ್ರಾಮದಲ್ಲಿ
ನಡೆದಿದೆ.
38 ವರ್ಷದ ನಾಗೇಂದ್ರ ಮೃತ ವ್ಯಕ್ತಿ. ಮೃತ ನಾಗೇಂದ್ರ
ಬಂಡೆಹಟ್ಟಿ ಗ್ರಾಮದವರು.
ಕೂಲಿ ಕೆಲಸಕ್ಕೆಂದು ಸ್ಟೋನ್ ಕ್ರಷರ್
ಗೆ ಹೋಗುತ್ತಿದ್ದರು. ಡ್ರಿಲ್ಲಿಂಗ್ ವೇಳೆ ಆಯತಪ್ಪಿ ಬಿದ್ದು ನಾಗೇಂದ್ರ
ಸಾವನ್ನಪ್ಪಿದ್ದಾರೆ..
ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಟಿ ಬಿ. ರಾಜಣ್ಣ
ಪೋಲಿಸ್ ಇನ್ಸೆಕ್ಟರ್ ದೇಸಾಯಿ ಭೇಟಿ ನೀಡಿ ಪರಿಶೀಲನೆ
ನಡೆಸಿದ್ದಾರೆ.