ಚಳ್ಳಕೆರೆ :
10 ನೆ ದಿನಕ್ಕೆ ಕಾಲಿಟ್ಟ ಲಾರಿಮಾಲೀಕರ ಧರಣಿ
ಸತ್ಯಾಗ್ರಹ
ಹೊಳಲ್ಕೆರೆಯ ತಣಿಗೆ ಹಳ್ಳಿಯಲ್ಲಿ ನಾರಾಯಣ್ ಮೈನ್ ವಿರುದ್ಧ
ನಡೆಸುತ್ತಿರುವ ಪ್ರತಿಭಟನೆಯು ಇಂದಿಗೆ 10 ದಿನಕ್ಕೆ ಕಾಲಿಟ್ಟಿದೆ.
ವಿವಿಧ ಸಮಾಜದ ಮುಖಂಡರು ಹಾಗೂ ದಲಿತ ಸಂಘರ್ಷ
ಸಮಿತಿ ನೇತೃತ್ವದಲ್ಲಿ ಮೈನಿಂಗ್ ಕಂಪನಿಯ ವಿರುದ್ಧ ಪ್ರತಿಭಟನೆ
ನಡೆಸಲಾಗುತ್ತಿದೆ.
ಲಾರಿ ಮಾಲೀಕರಿಗೆ ಕಂಪನಿಯಿಂದ ಆಗುತ್ತಿರುವ
ಅನ್ಯಾಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ
ಅನ್ಯಾಯವನ್ನು ಸರಿಪಡಿಸಿ, ಲಾರಿ ಮಾಲೀಕರಿಗೆ ಅದಿರು ಲೋಡು
ನೀಡಿ, ಸಹಕರಿಸುವಂತೆ ಒತ್ತಾಯಿಸಿದ್ದಾರೆ.