ಚಳ್ಳಕೆರೆ :
ಅಪ್ರಾಪ್ತ ಬಾಲಕಿಯ ಮದುವೆಯಾದ ಆರೋಪಿ ವಿರುದ್ದ
ಎಫ್. ಐ. ಆರ್ ದಾಖಲು
ತಾಲ್ಲೂಕಿನಲ್ಲಿ ಬಚ್ಚಬೋರನಟ್ಟಿ ಗ್ರಾಮದ ಬಾಲ್ಯವಿವಾಹ
ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮದುವೆಯಾದ
ಆರೋಪಿ ವಿರುದ್ದ ಎಫ್. ಐ. ಆರ್ ದಾಖಲಿಸಲಾಗಿದೆ.
ಹಿರಿಯೂರು ತಾಲ್ಲೂಕಿನ ಯಲ್ಲಕರನಹಳ್ಳಿ ಗ್ರಾಮದ ಹರೀಶ್
ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯನ್ನು
ಬಾಲ್ಯ ವಿವಾಹವಾಗಿದ್ದ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯಿಂದ ಘಟನೆಯನ್ನು ಪರಿಶೀಲಿಸಿ, ಚಳ್ಳಕೆರೆ
ಸಿಡಿಪಿಓ ಪರಿಶೀಲಿಸಿ ನಾಯಕನಹಟ್ಟಿ ಪೊಲೀಸ್ ಠಾಣೆಯಲಿ,
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಪ್ರಕರಣ
ದಾಖಲಿಸಿದ್ದಾರೆ.