ಚಳ್ಳಕೆರೆ :
ಚಿತ್ರದುರ್ಗ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಧರ್ಮೇಂದ
ಕುಮಾರ್ ಮೀನಾ ಅವರನ್ನು
ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ
ಆದೇಶಿಸಿದೆ.
ನವದೆಹಲಿಯ ರಾಷ್ಟ್ರೀಯ ತಾಂತ್ರಿಕ
ಸಂಶೋಧನಾ ಸಂಸ್ಥೆಯಲ್ಲಿ (NTRO)
ಪೇ ಮ್ಯಾಟ್ರಿಕ್ಸ್ ಹಂತ 12ರ
ವಿಜ್ಞಾನಿಯನ್ನಾಗಿ ಧರ್ಮೇಂದರ್
ಕುಮಾರ್ ಮೀನಾ ನೇಮಕವಾಗಿದ್ದಾರೆ.
ಧರ್ಮೇಂದರ್ ಕುಮಾರ್ ಮೀನಾ
ಅವರಿಂದ ತೆರವಾಗಿರುವ ಚಿತ್ರದುರ್ಗ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ
ಯಾವುದೇ ನೇಮಕಾತಿ ಮಾಡಿಲ್ಲ.