ಚಳ್ಳಕೆರೆ :
ಸುಮಾರು ದಶಕಗಳ ಕಾಲ ಒಳಮೀಸಲಾತಿಗಾಗಿ ಹೋರಾಟ ನಡೆಸಿದ ಫಲವಾಗಿ ಹಾಗೂ ನ್ಯಾಯಾಲಯದ ತೀರ್ಪು ಇಂದು ನೀಡಿದ್ದರಿಂದ ಹೋರಾಟಗಾರರ ಮೊಗದಲ್ಲಿ ಮಂದಹಾಸ ಬೀರಿದೆ.
ಸುಪ್ರಿಂ ಕೋರ್ಟ್ ತೀರ್ಪು ಕೂಡ ಒಳಮೀಸಲಾತಿ ಪರವಾಗಿ ಆದೇಶ ನೀಡಿದ್ದರಿಂದ ಹೋರಾಟಗಾರರ ಫಲಕ್ಕೆ ಸಂದ ಜಯವಾಗಿದೆ.
ಒಳಮೀಸಲಾತಿಯ ಪರವಾಗಿ
ಸುಪ್ರೀಂ ಕೋರ್ಟ್ ನೀಡಿದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲೂಕಿನ
ಮಾದಿಗ ಮುಖಂಡರ ಸಂತಸ ಮನೆಮಾಡಿತ್ತು.
ಒಳ ಮೀಸಲಾತಿಯಿಂದ ಸಮಾನತೆಗೆ
ಧಕ್ಕೆಯಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು
ಚಳ್ಳಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಿನ ಎಲ್ಲಾ ಮಾದಿಗ ಮುಖಂಡರು ಪ್ರತಿಮೆಗೆ ಹೂವು ಮಾಲೆ ಹಾಕಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ನೆಹರು ವೃತ್ತದಲ್ಲಿ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ಸುಪ್ರೀಂಕೋರ್ಟ್ ಸಾಂವಿಧಾನಿಕ
ಪೀಠದಿಂದ ತೀರ್ಪು ನೀಡಿದೆ.
ಎಸ್ಸಿಎಸ್ಟಿ ಮೀಸಲಾತಿಯಲ್ಲಿ
ಉಪವರ್ಗಿಕರಣ ಅಧಿಕಾರ
ರಾಜ್ಯಗಳಿಗೆ ಇದೆ ಎಂದು ಮುಖ್ಯ
ನ್ಯಾಯಮೂರ್ತಿ ಡಿ.ವೈ, ಚಂದ್ರಚೂಡ್
ಅವರಿಂದ ಸಾಂವಿಧಾನಿಕ ನ್ಯಾಯಪೀಠ
ಆದೇಶದಲ್ಲಿ ತಿಳಿಸಿದ ಹಿನ್ನಲೆಯಲ್ಲಿ
ಉಪಪಂಗಡಗಳ
ಒಳ ಮೀಸಲಾತಿಯಿಂದ ಸಮಾನತೆಯ
ನಿಯಮ ಉಲ್ಲಂಘನೆ ಆಗಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಒಳಮೀಸಲಾತಿ ಪರವಾಗಿ ತೀರ್ಪು ಬಂದಿದ್ದರಿಂದ ನಮ್ಮ ಮಕ್ಕಳ ನೌಕರಿ ಹಾಗೂ ಸಮಾನತೆಯ ಹಾದಿಯಲ್ಲಿ ಸಾಗುವುದಕ್ಕೆ ದಾರಿಯಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಮಾದಿಗ ಸಮುದಾಯದ ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ಇದೇ ಸಂಧರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ಎಂ.ಶಿವಮೂರ್ತಿ, ಕರಿಕೆರೆ ತಿಪ್ಪೇಸ್ವಾಮಿ, ಚನ್ನಗಾನಹಳ್ಳಿ ಮಲ್ಲೇಶ್, ಮೂರ್ತಿ, ಶ್ರೀನಿವಾಸ್, ರಾಮದಾಸ್, ಮಾದಿಗ ದಂಡೋರದ ಪದಾಧಿಕಾರಿಗಳು ಕಾಂತರಾಜ್, ತಿಪ್ಪೇಸ್ವಾಮಿ, ಭಿಮಣ್ಣ, ಹಳೆನಗರದ ವೆಂಕಟೇಶ್, ಹೆಚ್.ಎಸ್.ಸೈಯದ್, ದ್ಯಾವರನಹಳ್ಳಿ ಸುರೇಶ್.
ಆರ್ ಡಿ.ಮಂಜುನಾಥ್, ರಾಮಾಂಜನೇಯ, ಹೊನ್ನುರಸ್ವಾಮಿ, ಮಾರುತಿ, ಷಣ್ಮುಖ, ರಾಜಣ್ಣ, ರುದ್ರಮುನಿಯಪ್ಪ, ನಾಗಭೂಷಣ್, ಪ್ರಭು, ಲಿಂಗರಾಜ್, .ಇನ್ನೂ ಇತರರು ಪಾಲ್ಗೊಂಡಿದ್ದರು.