10 ಲಕ್ಷದ ಬಸ್ ನಿಲ್ದಾಣಕ್ಕೆ ಚಾಲನೆ ನೀಡಿದ.
ಶಾಸಕ ಎನ್ ವೈ ಗೋಪಾಲಕೃಷ್ಣ.
ನಾಯಕನಹಟ್ಟಿ:: ಜುಲೈ 30. ಪ್ರಯಾಣಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣವನ್ನ ನಿರ್ಮಿಸಲಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.
ಮಂಗಳವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದಾವಣಗೆರೆ ಚಳ್ಳಕೆರೆ ರಸ್ತೆಯಲ್ಲಿ 2023-24ನೇ ಸಾಲಿನ ಸ್ಥಳೀಯ ಪ್ರದೇಶಭಿವೃದ್ಧಿ ಯೋಜನೆಯಡಿ 10 ಲಕ್ಷ ವೆಚ್ಚದ ಬಸ್ ನಿಲ್ದಾಣಕ್ಕೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ ಬರುವಂತ ಭಕ್ತಾದಿಗಳಿಗೆ ಈ ಬಸ್ ನಿಲ್ದಾಣ ನಿಲ್ದಾಣ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದರು.
ಇದೇ ಸಂದರ್ಭದಲ್ಲಿ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ, ತಾಲೂಕು ಪಂಚಾಯತಿ ಇ ಒ ಶಶಿಧರ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪಾಲಯ್ಯ, ಕಾಂಗ್ರೆಸ್ ಮುಖಂಡ ಪ್ರಭುಸ್ವಾಮಿ, ಬಂಡೆ ಕಪಿಲೆ ಓಬಣ್ಣ, ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ವಕೀಲ ಉಮಾಪತಿ, ಮುದಿಯಪ್ಪ, ಚೌಳಕೆರೆ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ,ಮಲ್ಲೂರಹಳ್ಳಿ ಬಿ.ಕಾಟಯ್ಯ, ತೊರೆಕೋಲಮ್ಮನಹಳ್ಳಿ ಸೋಶಿಯಲ್ ಮೀಡಿಯಾ ಮಂಜು ಜವಳಿ, ಬಗರ ಉಕುಂ ಸದಸ್ಯ ಪಿ.ಜಿ ಬೋರ ನಾಯಕ, ವರವು ಕಾಟಯ್ಯ, ಮಲ್ಲೂರಹಳ್ಳಿ ಜೆಸಿಬಿ ಮಲ್ಲಿಕಾರ್ಜುನ, ಕೆ ಟಿ ನಾಗರಾಜ್, ಎನ್ ದೇವರಹಳ್ಳಿ ಟಿ ರಾಜಣ್ಣ, ಭೀಮನಕೆರೆ ಸುರೇಂದ್ರ, ಇನ್ನು ಅನೇಕ ಕಾಂಗ್ರೆಸ್ ಮುಖಂಡರು ಹಾಜರಿದ್ದರು.