ಸಾರ್ವಜನಿಕವಾಗಿ ಬಂದ ಹಣವನ್ನು ಸಾರ್ವಜನಿಕವಾಗಿ ಉಪಯೋಗವಾಗಬೇಕು ಶಾಸಕ ಎನ್ ವೈ ಗೋಪಾಲಕೃಷ್ಣ.
ತಳಕು:: ಜುಲೈ 30. ಸಾರ್ವಜನಿಕರ ಹಣ ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಉಪಯೋಗವಾಗಬೇಕು. ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.
ಮಂಗಳವಾರ ತಳಕು ಗ್ರಾಮದಲ್ಲಿ 2022 23ನೇ ಸಾಲಿನ ಕೆ ಆರ್ ಐ ಡಿ ಎಲ್ ಯೋಜನೆಯಡಿ 51.50 ಲಕ್ಷದ ಹಳ್ಳಿ ಸಂತೆ ಮಾರುಕಟ್ಟೆ ನಿರ್ಮಾಣ ಕಾಮಗಾರಿಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಸದುಪಯೋಗವಾಗಬೇಕು ಹಳ್ಳಿ ಸಂತೆ ಮಾರುಕಟ್ಟೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಮಾದರಿಯ ಹಳ್ಳಿ ಸಂತೆ ಮಾರುಕಟ್ಟೆಯಂತೆ ಮಾದರಿಯಾಗಬೇಕು.
ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಆಗಬಾರದು ಬಹಳ ದಿನಗಳ ಕಾಲ ಕುಂಠಿತವಾಗಿದ್ದ ಈ ಕಾಮಗಾರಿ ನಾನು ಶಾಸಕನಾದ ನಂತರ ಕೊಂಡ್ಲಹಳ್ಳಿ ಸಂತೆ ಮಾರುಕಟ್ಟೆ ತಳಕು ಸಂತೆ ಮಾರುಕಟ್ಟೆ ನಾಯಕನಹಟ್ಟಿ ಬಸ್ ನಿಲ್ದಾಣಕ್ಕೆ ಇಂದು ಉದ್ಘಾಟನೆ ಮಾಡಲಾಗಿದೆ.
ಯಾವುದು ದೃಷ್ಟಿಯಿಂದ ಯಾವುದೂ ಪಕ್ಷದ ಹಿರಿಯರಿಗೆ ಅವಮಾನ ಮಾಡುವಂತಹ ವ್ಯತ್ಯಾಸ ಆಗಬಾರದು ಸಾರ್ವಜನಿಕವಾಗಿ ಬಂದ ಹಣ ದುರುಪಯೋಗವಾಗಬಾರದು ಆ ಹಣವನ್ನು ಕಾದಿರಿಸಬಾರದು ನಾವು ಯಾವು ಉದ್ದೇಶಕ್ಕೆ ಹಣವನ್ನು ಬಳಸಬೇಕು ಅದಕ್ಕೆ ಮಾತ್ರ ಹಣವನ್ನು ಬಳಸಬೇಕು ಅನ್ನುವ ಉದ್ದೇಶದಿಂದ ನಿನ್ನೆ ಈ ಕಾರ್ಯಕ್ರಮ ನಡೆಯಬೇಕಾಗಿತ್ತು.
ಕ್ಷೇತ್ರದ ಶಾಸಕರು ಕೆಲವು ಬಿಜೆಪಿ ಕಾರ್ಯಕರ್ತರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಾರೆ ನಮ್ಮ ಸ್ನೇಹಿತ ಸಂಸದ ಗೋವಿಂದ ಕಾರಜೋಳ ತುಂಬಾ ಅನುಭವಿ ರಾಜಕಾರಣಿ 1994ರಲ್ಲಿ ಅವರು ನಾವು ಒಟ್ಟಿಗೆ ಶಾಸಕರಾಗಿ ಅಸೆಂಬ್ಲಿಯಲ್ಲಿ ಹೋದಂತವರು ಉತ್ತಮ ಅಭಿವೃದ್ಧಿ ಕೆಲಸ ಮಾಡುವಂತಹ ಸಂಸದರು ಅವರ ಬಗ್ಗೆ ತುಂಬಾ ಗೌರವವಿದೆ ನನಗೆ ಆದರೆ
ಈ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳುವಂತದ್ದು ಗೆದ್ದ ಮೇಲೆ ಎಂಎಲ್ಎ ಎಂಪಿ ಆಗಿರಲಿ ಅಣ್ಣ ತಮ್ಮಂದಿರು ಇದ್ದಂಗೆ ಇರ್ತೀವಿ ನಾವು ಇಲ್ಲಿ ಯಾವ ವ್ಯತ್ಯಾಸ ಭಾವನೆ ನಮಗೆ ಬರಲ್ಲ ನಿಮ್ಮ ಗ್ರಾಮಕ್ಕೆ ಸಂಬಂಧಪಟ್ಟಂತ ನಿಮ್ಮೂರಲ್ಲಿ ಆಗುವಂತ ಕಾರ್ಯಕ್ರಮಕ್ಕೆ ನಮ್ಮನ್ನು ಮತ್ತು ಸಂಸದರನ್ನು ಕರೆಯುವುದು ಬೇಡ ನೀವೇ ಉದ್ಘಾಟನೆ ಮಾಡಿಕೊಳ್ಳಿ ನಿಮ್ಮ ಗ್ರಾಮ ಪಂಚಾಯತಿಯ ಅಧ್ಯಕ್ಷರ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಮಾಡಿಕೊಂಡರೆ ನಾನು ನಿಜವಾಗಿ ಸಂತೋಷ ಪಡುತ್ತೇನೆ ಇದರಲ್ಲಿ ರಾಜಕೀಯ ಮಾಡುವ ಉದ್ದೇಶ ಬೇಡ ಸಹೋದರ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಇದು ನಿಮ್ಮೂರು ನಿಮ್ಮದೇ ಆಸ್ತಿ ನಿಮ್ಮದೇ ಹಣ ನೀವು ಕಟ್ಟಿಕೊಂಡಿರುವ ವ್ಯವಸ್ಥೆ ನನಗೆ ಗೊತ್ತಿಲ್ಲ ಸರ್ಕಾರದಿಂದ ಬಂದಂತ ಯಾವುದೇ ಕಾರ್ಯಕ್ರಮ ಆಗಿರಲಿ ಇನ್ನು ಮೇಲೆ ರಾಜಕೀಯ ದುರದ್ದೇಶ ಮಾಡುವುದು ಬೇಡ ಎಂದು ಬೇಸರವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಎಪಿಎಂಸಿ ಕುಮಾರಣ್ಣ, ಕೆಡಿಪಿಎಂ ವಿಶ್ವನಾಥ್ ರೆಡ್ಡಿ, ತಾಲೂಕು ಪಂಚಾಯಿತಿ ಇಒ ಶಶಿಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ. ದ್ರಾಕ್ಷಾಯಿಣಿ, ಉಪಾಧ್ಯಕ್ಷ ಉಮಾಕುಮಾರ್, ಸದಸ್ಯರಾದ ಟಿ ರವಿಚಂದ್ರ, ಎಂ ತಿಪ್ಪೇಸ್ವಾಮಿ, ಪಿ.ಎಂ. ಚಂದ್ರಣ್ಣ, ಚನ್ನಯ್ಯ, ನೀಲಮ್ಮ ನಾಗರಾಜ್, ಗೌರಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜಮ್ಮ, ಗಿರಿಯಮ್ಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕ್ಯಾಸಯ್ಯ, ಎಇಇ. ನಟರಾಜ್, ಪಿಡಿಒ ಬಿ.ಓಬಯ್ಯ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರುi