ಚಳ್ಳಕೆರೆ :

ಕಸವನ್ನು ರಸ್ತೆಗೆ ಎಸೆಯುವವರ ವಿರುದ್ಧ ಕಠಿಣ ಕ್ರಮವಹಿಸಿದ ಚಳ್ಳಕೆರೆ ನಗರಸಭೆ ಅಧಿಕಾರಿಗಳು ಅಂತಹವರಿಂದ ನ್ಯಾಯಾಲದಲ್ಲಿ ದಂಡವನ್ನು ಕಟ್ಟಿಸಿ ಇತರರಿಗೆ ಮಾದರಿಯಾಗಿದೆ.

ಹೌದು
ಚಳ್ಳಕೆರೆ ನಗರಸಭಾ ವ್ಯಾಪ್ತಿಯಲ್ಲಿನ ಸೋಮಗುದ್ದು ರಸ್ತೆಯ ಭದ್ರಮೇಲ್ದಂಡೆ ಕಚೇರಿಯ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಸಾರ್ವಜನಿಕರು ಕಸದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದು ಸುತ್ತಲಿನ ಸಾರ್ವಜನಿಕರಿಗೆ ತೊಂದರೆಯಾಗತ್ತಿದೆ ಎಂದು ಹಲವು ಬಾರಿ ನಗರಸಭೆ ಅಧಿಕಾರಿಗಳೆ ಸ್ವಚ್ಚತೆ‌ ಮಾಡಿಸಿದ್ದರು.

ಆದರೆ‌ ಕೆಲವರು ‌ಆದೇ ಹಳೆ ಚಾಳಿ ಮುಂದುವರೆಸಿದ್ದರಿಂದ ದಂಡದ ಮೊರೆ‌ಹೊಗಿದ್ದಾರೆ.

ಈ‌ ಕುರಿತು ನಗರಸಭೆಯ ವತಿಯಿಂದ ಹಲವಾರು ಬಾರಿ ಅರಿವು ಮೂಡಿಸಿ, ಬೋರ್ಡ್ ಹಾಕಿ ಸಾರ್ವಜನಿಕರಿಗೆ ತ್ಯಾಜ್ಯ ಸುರಿಯದಂತೆ ಸೂಚಿಸಿದರು

ಸಹ ತ್ಯಾಜ್ಯವನ್ನು ತಂದು ಸುರಿಯುವುದು ಕಂಡು ಬಂದ‌ ಹಿನ್ನಲೆಯಲ್ಲಿ ರಾಮಣ್ಣ, ಮುಮ್ತಾಜ್, ಶಾರದಮ್ಮ, ಚಲುಮಪ್ಪ ರವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಮೊರೆ‌ ಹೋಗಲಾಗಿತ್ತು.

ಅದರಂತೆ ನ್ಯಾಯಾಲಯದಲ್ಲಿ ತಲಾ 50 _ರೂಪಾಯಿ ದಂಡ ಕಟ್ಟಿದ್ದಾರೆ.

ಇನ್ನೂ ನಗರಸಭೆಯ ಆರೋಗ್ಯ ನಿರೀಕ್ಷಕರಾದ ಗೀತಾ ಕುಮಾರಿ ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ
ತ್ಯಾಜ್ಯವನ್ನು ತಂದು ಸುರಿಯುತ್ತಿದ್ದವರಿಗೆ ಜಾಗೃತಿ ಮೂಡಿಸಿ ಖಾಲಿ ಸ್ಥಳದಲ್ಲಿ ಸರಕಾರಿ‌ ಜಾಗ ರಸ್ತೆ ಪಕ್ಕದ ಜಾಗದ ಸ್ಥಳದಲ್ಲಿ ತ್ಯಾಜ್ಯವನ್ನು ಸುರಿಯದಂತೆ ಎಚ್ಚರಿಕೆ ನೀಡಿ ನಗರಸಭೆ ನಿಗಧಿ ಪಡಿಸಿದ ಸ್ಥಳ ಹಾಗೂ ನಗರಸಭೆ ವಾಹನ ಬಂದಾಗ ಕಸ ಹಾಕಿ ಸ್ವಚ್ಚತೆ ಕಾಪಾಡುವಂತೆ ಕರೆ ನೀಡಿದ್ದಾರೆ.

Namma Challakere Local News
error: Content is protected !!