ಚಳ್ಳಕೆರೆ :
ಸುಳ್ಳು ಸುದ್ದಿ ಹಬ್ಬಿಸಬೇಡಿ: ಶಿವನಗೌಡ
ನಾವು ಯಾವುದೇ ಸಂಧಾನಕ್ಕೆ ಹೊರಟಿಲ್ಲ, ಕೆಲ ಮಾಧ್ಯಮಗಳಲ್ಲಿ
ಹೀಗೆ ಬರುತ್ತಿದೆ.
ಈ ರೀತಿ ಸುದ್ದಿ ಹಬ್ಬಿಸಬೇಡಿ ಎಂದು ಚಿತ್ರದುರ್ಗದ
ರೇಣುಕಾಸ್ವಾಮಿ ತಂದೆ ಶಿವನಗೌಡ ಮನವಿ ಮಾಡಿದರು.
ನಮ್ಮ ಕುಟುಂಬ ಕೊಲ್ಯಾಪ್ಸ್ ಆಗಿದೆ. ಬಹಳಷ್ಟು ನೋವು
ಅನುಭವಿಸುತ್ತಿದ್ದೇವೆ. ವಯಸ್ಸಾದ ನಮ್ಮನ್ನು ನೋಡಿಕೊಳ್ಳುವವರು
ಯಾರಿಲ್ಲ. ನನ್ನ ಸೊಸೆಗೊಂದು ಖಾಯಂ ನೌಕರಿ ಕೊಡಬೇಕು.
ತಪ್ಪಿತಸ್ಥರು ಯಾರೆಂದು ನಮಗೆ ಗೊತ್ತಿಲ್ಲ. ಯಾರಾದರೂ ಆಗಲಿ
ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.