ಚಳ್ಳಕೆರೆ :
ಖತರ್ನಾಕ್ ಕಳ್ಳನ ಮೇಲಿರೋದು ಬರೊಬ್ಬರಿ 18
ಪ್ರಕರಣಗಳು
ಅಂತರರಾಜ್ಯ ಖತರ್ನಾಕ್ ಕಳ್ಳನನ್ನು ಹಿಡಿದಿರುವ ಹನುಮಂತನ
ಮೇಲೆ 18 ಪ್ರಕರಣಗಳಿವೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್
ಮೀನಾ ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿದರು.
ಹಿರಿಯೂರು ನಗರ ಠಾಣೆಯಲ್ಲಿ 8, ಹಿರಿಯೂರು
ಗ್ರಾಮಾಂತರ 5, ಹೊಸದುರ್ಗ 2, ಅಬ್ಬಿನಹೊಳೆ 1, ಚಿತ್ರದುರ್ಗದ
ಬಡಾವಣೆ ಠಾಣೆಯಲ್ಲಿ 1, ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ
1 ಸೇರಿ ಒಟ್ಟು 15 ಮನೆಗಳ್ಳತನ ಮತ್ತು 3 ಬೈಕ್ ಕಳ್ಳತನ
ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಿದರು.