ಚಳ್ಳಕೆರೆ :
ಪಕ್ಷಿ ಪ್ರಾಣ ಉಳಿಸಲು ಹೋಗಿ ಹಾರಿ ಹೋಯ್ತು
ಬಾಲಕನ ಪ್ರಾಣ ಪಕ್ಷಿ
ಪಾರಿವಾಳವೊಂದು ಆಕಸ್ಮಿಕವಾಗಿ ವಿದ್ಯುತ್ ಕಂಬದ ಮೇಲಿನ
ತಂತಿಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು
ಕಂಡ ಬಾಲಕನು ಪಾರಿವಾಳವನ್ನು ರಕ್ಷಿಸಲು ಹೋಗಿ ತಾನೇ
ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ತಾಲ್ಲೂಕಿನ
ಹನುಮಾಪುರ ಗ್ರಾಮದಲ್ಲಿನ ವಿದ್ಯುತ್ ಕಂಬದ ಮೇಲಿನ ವಿದ್ಯುತ್
ತಂತಿಗೆ ಪಾರಿವಾಳ ಸಿಲುಕಿ ಒದ್ದಾಡುತ್ತಿರುವಾಗ, ಪಾರಿವಾಳವನ್ನು
ರಕ್ಷಣೆ ಮಾಡಲೆಂದು ಗ್ರಾಮದ ರಾಮಚಂದ್ರ (12) ವಿದ್ಯುತ್
ಕಂಬ ಮೇಲೇರಿ ಪಾರಿವಾಳವನ್ನು ರಕ್ಷಿಸಲು ಹೋಗಿ ತಾನೇ
ಬಲಿಯಾಗಿದ್ದಾನೆ.