ಚಳ್ಳಕೆರೆ ,:
ಬೆಳೆ ವಿಮೆಗಾಗಿ ರೈತರಿಂದ ಡಿಸಿ ಕಚೇರಿ ಬಳಿ ಪ್ರತಿಭಟನೆ
ಹಿರಿಯೂರಿನ ಎಂಡಿ ಕೋಟೆ ಗ್ರಾಮ ಪಂಚಾಯಿತಿಯ ಏಳು
ಹಳ್ಳಿಗಳಲ್ಲಿ ರೈತರು ನೂರಾರು ಎಕೆರೆಗೆ ಶೇಂಗಾ ಬೆಳೆ ವಿಮೆಯನ್ನು
ಕಟ್ಟಿದ್ದು, ಒಂದು ಪೈಸೆಯೂ ಬಂದಿಲ್ಲ.
ಅಧಿಕಾರಿಗಳು
ಅವೈಜ್ಞಾನಿಕವಾಗಿ ಸರ್ವೇ ಮಾಡಿದ್ದಾರೆಂದು ಆರೋಪಿಸಿ ರೈತರು
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ
ಕಚೇರಿ ಮುಂದೆ ನ್ಯಾಯ ಕೊಡಿ ಇಲ್ಲವೆ ವಿಷ ಕೊಡಿ ಎಂದು
ಘೋಷಣೆ ಹಾಕುವ ಮೂಲಕ ಆಕ್ರೋಶ ಹೊರ ಹಾಕಿದರು.