ಚಳ್ಳಕೆರೆ : ರೈತರ ಗಮನಕ್ಕೆ ತರದೆ ಪಹಣಿಗೆ
ಆಧಾರ್ ಲಿಂಕ್ ಮಾಡುವ ಅವೈಜ್ಞಾನಿಕ ಕಾನೂನನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆಯಿಂದ ನಗರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಎನ್.ಎಅ್.ರಾಜು ರವರಿಗೆ ಮನವಿ ಸಲ್ಲಿಸಿದರು.

ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಗೆ ಪ್ರತಿಭಟನೆ ಮೂಲಕ ಆಗಮಿಸಿದ ರೈತರು ಘೋಷಣೆಗಳನ್ನು ಕೂಗುತ್ತಾ ರೈತ ವಿರೋಧಿ ಸರ್ಕಾರ, ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕು ಅವಜ್ಞಾನಿಕ ರೈತರ ಪಂಪ್ ಸೆಟ್ ಗಳಿಗೆ ಪಹಣಿ ಆಧಾರ್ ಲಿಂಕ್ ಮಾಡುವ ಕಾನೂನನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಆಕ್ರೋಶ ವ್ಯಕ್ತಪಡಿಸಿದ ಅವರು ,
ಬೆಸ್ಕಾಂ ಇಲಾಖೆ ಅಧಿಕಾರಿಗಳು ಈ ದೇಶಕ್ಕಾಗಿ ಅನ್ನ ಬೆಳೆಯುವ ರೈತರ ಪಂಪ್‌ಸೆಟ್‌ಗಳಿಗೆ
ರೈತರಿಗಾಗಲಿ ಮತ್ತು ರೈತ ಸಂಘಗಳ ಮುಂಖಡರಿಗಾಗಲಿ ಮಾಹಿತಿ ನೀಡದೆ ಏಕಾ ಏಕಿ ರೈತರ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಯಾವ ಉದ್ದೇಶಕ್ಕೆ ,

ಇಲ್ಲಿವರೆಗೂ ನಮ್ಮನ್ನಾಳಿದ ಕೇಂದ್ರ ಮತ್ತು ರಾಜ್ಯ
ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ, ಕೊಡದೇ ಮತ್ತು ಕೃಷಿಗೆ ಮುಖ್ಯವಾಗಿ
ಬೇಕಾಗಿರುವಂತಹ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ರೈತರು ಮಾಡುವ ಕೃಷಿ ಭೂಮಿಗೆ ನೀರನ್ನು
ಕೊಟ್ಟಿರುವುದಿಲ್ಲ ಮತ್ತು ರೈತರಿಗೆ ಕೊಡುವಂತಹ ಅನುದಾನವನ್ನು ಸಮರ್ಪಕವಾಗಿ ಕೊಟ್ಟಿರುವುದಿಲ್ಲ ಮತ್ತು
ರೈತರ ಕಷ್ಟಗಳಿಗೆ ಯಾವುದೇ ಸರ್ಕಾರಗಳೂ ಇದೂವರೆಗೂ ಸ್ಪಂದಿಸಿರುವುದಿಲ್ಲ ಆದ್ದರಿಂದ ಕೃಷಿ ಕ್ಷೇತ್ರ ದಿವಾಳಿ
ಅಂಚಿಗೆ ತಲುಪುತ್ತಿದೆ ಎಂದರು.

ಇದನ್ನು
ರೈತ ಸಂಘ ಹಾಗೂ
ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ರೈತ ಸಂಘಟನೆಗಳು ಹಾಗೂ ಎಲ್ಲಾ ಸಂಘಗಳು ಸಂಸ್ಥೆಗಳು
ಉಗ್ರವಾದ ಹೋರಾಟವನ್ನು ಮಾಡಬೇಕಾಗುವುದು ಎಂದು ತಮ್ಮ ಗಮನಕ್ಕೆ ಎಚ್ಚರಿಕೆ ನೀಡಿದೆ.

ಇದೇ ಸಂಧರ್ಭದಲ್ಲಿ ತಾಲೂಕಾಧ್ಯಕ್ಷ ಕೆ ಪಿ ಶ್ರೀಕಂಠ ಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್ ಬಸವರಾಜ್, ಸಹಕಾರ್ಯದರ್ಶಿ, ಜಿಎಚ್ ಹನುಮಂತಪ್ಪ ,ರಾಜಣ್ಣ ,ಪ್ರಕಾಶ್, ತಿಪ್ಪೇಸ್ವಾಮಿ, ಓಬಯ್ಯ, ಮಹೇಶ್, ಕುಮಾರ್, ಬೊಮ್ಮಯ್ಯ, ಸಣ್ಣಪಾಲಯ್ಯ, ತಿಪ್ಪೇಸ್ವಾಮಿ, ಜಯಣ್ಣ, ಬಂಗಾರಯ್ಯ, ಮಲ್ಲಮ್ಮ, ಹಲವು ರೈತರು ಪಾಲ್ಗೊಂಡಿದ್ದರು

Namma Challakere Local News

You missed

error: Content is protected !!