ಚಳ್ಳಕೆರೆ :
ರೈತ ಚುಳುವಳಿಗಳು ರೈತರ ಸಂಕಷ್ಟಕ್ಕೆ ಹಾಗೂ ರೈತನಿಗೆ ಹಾಗುವ ಅನ್ಯಾಯದ ವಿರುದ್ಧ ಧ್ವನಿಯಾಗಿ ಕೆಲಸ ಮಾಡಬೇಕು ನರಗುಂದ ನವಲಗುಂದ ಚಳುವಳಿಯ ಕಾಲದಲ್ಲಿ ಇದ್ದ ರೈತ ಸಂಘಟನೆಗಳ ಬಲ ಈಗ ಅರಿದು ಹಂಚಿಹೋಗಿದ್ದಾವೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಒಂದು ನಿಮಿಷಗಳ ಕಾಲ ಮೌನ ಆಚರಿಸಿ ನಂತರ ರೈತ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು,
ಇಂದಿನ ಕಾಲಘಟ್ಟದಲ್ಲಿ ಕೇವಲ ಪದವಿಗಾಗಿ, ಅಧಿಕಾರಕ್ಕಾಗಿ ಕೆಲವರು ತಮ್ಮ ರೈತ ಸಂಘಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಆದರೆ ನಿಜವಾದ ರೈತ ಮುಖಂಡ ಒಬ್ಬ ರೈತನಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು, ನರಗುಂದ ನವಲಗುಂದ ಚಳುವಳಿಗಳ ದಿನಮಾನಗಳಲ್ಲಿ ನಾವು ಕಂಡಂತೆ ಇಡೀ ನಮ್ಮ ಬಯಲು ಸೀಮೆ ಚಳ್ಳಕೆರೆ ತಾಲೂಕಿನಿಂದ ಸುಮಾರು 70 ಬಸ್ಸುಗಳ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಬೃಹತ್ ಚಳುವಳಿಯಲ್ಲಿ ಭಾಗವಹಿಸಿದ ನಿರ್ದರ್ಶನಗಳಿದ್ದಾವೆ.
ಇನ್ನೂ ಇಡೀ ದೇಶಕ್ಕೆ ಅನ್ನ ನೀಡುವ ರೈತನಿಗೆ ಕೃಷಿ ಪಂಪ್ ಸೆಟ್ ಮೀಟರ್ ಅಳವಡಿಕೆ ದ್ವಂದ್ವ ಕಾನೂನು ವಿರುದ್ಧ ಸರ್ಕಾರಕ್ಕೆ ಎಚ್ಚರಿಸಲು ಬೃಹತ್ ಚಳುವಳಿಗಳ ಮೂಲಕ ಇಡೀ ರಾಜ್ಯದಲ್ಲಿ, ಇಡೀ ದೇಶದಲ್ಲಿ ಯಾವುದೇ ರೈತನಿಗೆ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಬಾರದು
ಇಡೀ ದೇಶಕ್ಕೆ ಅನ್ನ ಕೊಡುವ ರೈತ ನೊಬ್ಬನೆ ಎಂದು ಆ ಸಮಯದಲ್ಲಿ ಎಲ್ಲಾ ಕೃಷಿ ಪಂಪ್ ಸೆಟ್ ಗಳಿಗೆ ಸರ್ಕಾರ ಅಳವಡಿಸಿದ್ದ ಮೀಟರ್ ಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ವಾಪಸ್ಸು ಹಾಕಿದ್ದೇವೆ ಎಂದರು.
ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ ೧೩೯ ರೈತರು ಬಲಿಯಾದರು. ರಾಜ್ಯಾದ್ಯಂತ ರೈತ ಸಂಘಟನೆ ರೂಪುಗೊಂಡಿತು.
ಇದೇ ಸಂಧರ್ಭದಲ್ಲಿ ಗಿರೀಶ್ ರೆಡ್ಡಿ, ಹಾಗೂ ಹಲವು ರೈತ ಮುಖಂಡರು ಹಾಜರಿದ್ದರು.