ಮಡಿಲು ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ

ಹಣದಿಂದ ಆರೋಗ್ಯ ಸಂಪಾದಿಸಲು ಸಾಧ್ಯವಿಲ್ಲ: ಡಾ. ನವೀನ್ ಸರ್ಜಾ

ಸಿರಿಗೆರೆ

ಆರೋಗ್ಯ ಉತ್ತಮವಾಗಿದ್ದರೆ ಸಾಕಷ್ಟು ಹಣವನ್ನು ಸಂಪಾದನೆ ಮಾಡಬಹುದು, ಹಣದಿಂದ ಆರೋಗ್ಯವನ್ನು ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ ಇರುವಷ್ಟು ದಿನಗಳ ಕಾಲ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡು ನೆಮ್ಮದಿ ಜೀವನ ನಡೆಸಬೇಕಾಗಿದೆಂದು ಬಸಪ್ಪ ಮಲ್ಟಿ ಸ್ಪೆಷಲಿಸ್ಟ್ ವೈದ್ಯಾಧಿಕಾರಿ ಡಾ. ನವೀನ್ ಸರ್ಜಾ ಅವರು ತಿಳಿಸಿದರು.

ಸಿರಿಗೆರೆ ಸಮೀಪದ ಆಲಘಟ್ಟ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಹರು ಯುವ ಕೇಂದ್ರ ಹಾಗೂ ಆಲಘಟ್ಟ ಗ್ರಾಮ ಪಂಚಾಯಿತಿ, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಇವರುಗಳು ಸಹಾಯದೊಂದಿಗೆ ಬಸಪ್ಪ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯಿಂದ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು ಪ್ರಸ್ತುತ ದಿನಮಾನಗಳಲ್ಲಿ ಔಷಧೀಯ ಆಹಾರವನ್ನು ಸೇವಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಮುಂದಿನ ದಿನಗಳಲ್ಲಿ ಇದೆ ಮುಂದುವರೆದರೆ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕ ಆಹಾರವನ್ನ ಸೇವನೆ ಮಾಡಬೇಕೆಂದು ತಿಳಿಸಿದರು.

ಆಲಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಲ್ ಬಸವರಾಜ್ ಅವರು ಮಾತನಾಡಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವು ಮೊದಲು ಸ್ವಚ್ಛತೆ ಮಾಡಿಕೊಳ್ಳಬೇಕು, ಮನೆಯ ಸುತ್ತಮುತ್ತ ಔಷಧಿ ಗಿಡಗಳಾದ ಚೆಂಡು ಹೂ, ತುಳಸಿ, ಅಶ್ವಗಂಧ, ಅಲವೇರಗಳನ್ನ ಬೆಳೆಸುವುದರ ಮೂಲಕ ರೋಗಗಳನ್ನು ನಿಯಂತ್ರಿಸಬಹು ಪ್ರತಿಯೊಬ್ಬರು ಈ ಒಂದು ನಿಯಮವನ್ನು ಪಾಲನೆ ಮಾಡಿದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ದಿನೇ ದಿನೇ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿದೆ ಇದನ್ನು ತಡೆಗಟ್ಟಬೇಕಾದರೆ ನಾವು ನಮ್ಮ ಸ್ವಚ್ಛತೆ ನಾವು ಮಾಡಿಕೊಳ್ಳಬೇಕು. ಚರಂಡಿಗಳಲ್ಲಿ ಅಶುದ್ಧ ನೀರು ನಿಲ್ಲದಂತೆ, ಪ್ಲಾಸ್ಟಿಕ್ ವಸ್ತುಗಳನ್ನು ಶೇಖರಣೆ ಮಾಡದಂತೆ, ಟಯರ್ ಗಳಲ್ಲಿ ನೀರು ನಿಲ್ಲಸದಂತೆ ನೋಡಿಕೊಂಡರೆ ಡೆಂಗ್ಯೂನಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಆಲಘಟ್ಟ ಪಂಚಾಯಿತಿ ಅಧ್ಯಕ್ಷ ಕೆ.ಎಂ ನಾಗರಾಜಪ್ಪ ಮಾತನಾಡಿ ಮಡಿಲು ಸಂಸ್ಥೆ ವತಿಯಿಂದ ಗ್ರಾಮದಲ್ಲಿ ಆಯೋಜನೆ ಮಾಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಅತ್ಯಂತ ಮಹತ್ವದಾಗಿದೆ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಸಂಘ-ಸಂಸ್ಥೆಗಳ ಜೊತೆಗೆ ಸಾರ್ವಜನಿಕರು ಸಹ ಕೈಜೋಡಿಸಬೇಕು ಆಗ ಮಾತ್ರ ಸಮಾಜದಲ್ಲಿ ಉತ್ತಮ ವಾತಾವರಣ ಕಲ್ಪಿಸಲು ಸಾಧ್ಯ ಎಂದು ತಿಳಿಸಿದರು.

ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರಿಗೆ ಡಿಪಿ, ಶುಗರ್, ಇಸಿಜಿ ಸ್ಥಳದಲ್ಲಿ ನಡೆಸಿ ವೈದ್ಯರೊಂದಿಗೆ ರೋಗಿಗಳು ಆಪ್ತ ಸಮಲೋಚನೆ ನಡೆಸುವುದರ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕೆಂದು ಮಾಹಿತಿ ತಿಳಿಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಯುವಜನಾಧಿಕಾರಿ ಸುಹಾಸ್, ಆಲಘಟ್ಟ ಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮ, ಬಸಪ್ಪ ಮಲ್ಟಿ ಸ್ಪೆಷಲಿಸ್ಟ್ ವೈದ್ಯ ಡಾ. ರವಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಹಾಜಾರುಲ್ಲ, ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಭಾಗವತ್, ಉಪಾಧ್ಯಕ್ಷ ಗುರುಮೂರ್ತಿ, ಗ್ರಾಮದ ಕಾಂಗ್ರೆಸ್ ಯುವ ಮುಖಂಡ ವಿಜಯಕುಮಾರ್, ಮಡಿಲು ಸಂಸ್ಥೆಯ ಅಧ್ಯಕ್ಷರಾದ ಕುಮಾರಸ್ವಾಮಿ, ಉಪಾಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ಆನಂದಪ್ಪ, ಸದಸ್ಯರಾದ ಪ್ರದೀಪ, ಪ್ರವೀಣ ರಾಘವೇಂದ್ರ, ಸುಮನ್, ದ್ಯಾಮಕುಮಾರ್, ದರ್ಶನ್, ಮಹಾಂತೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು,

About The Author

Namma Challakere Local News
error: Content is protected !!