ಚಳ್ಳಕೆರೆ : ಆಟದ ಮೂಲಕ ಕಲಿಕೆ ಎಂಬಂತೆ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮುಗ್ಧ ಮನಸ್ಸನ್ನು ಹರಿತ ಶಾಲೆಯ ಶಿಕ್ಷಕರು ದಿನ ನಿತ್ಯದ ವ್ಯಾವಹಾರಿಕ ಜ್ಞಾನ ಸಂಪಾದನೆಗೆ ವಿಶೇಷವಾಗಿ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಿದ್ದಾರೆ.
ಹೌದು ಚಳ್ಳಕೆರೆ ತಾಲ್ಲೂಕು ನನ್ನಿವಾಳ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿಯಲ್ಲಿ ನಲಿ ಕಲಿ ಶಾಲಾ ಮಕ್ಕಳಿಂದ ಬೆಂಕಿ ಕಡ್ಡಿಗಳು ಹಾಗೂ ಸಣ್ಣ ಕಲ್ಲುಗಳಿಂದ ಅಕ್ಷರಗಳು ಹಾಗೂ ಪದಗಳ ರಚನೆ ಮಾಡುವುದರ ಮೂಲಕ ಕಲಿಕೆಯಲ್ಲಿ ತೊಡಗಿಸಿದ್ದಾರೆ.
ಹೆಚ್ಚು ಖರ್ಚು, ವೆಚ್ಚವಿಲ್ಲದೆ ಸ್ಥಳೀಯವಾಗಿ ಸಿಗುವಂತಹ ಹಾಗೂ ಪ್ರಕೃತಿಯಲ್ಲಿ ಸಿಗುವಂತಹ ವಸ್ತುಗಳ ಬಳಕೆಯಿಂದ ಮಕ್ಕಳು ಕಲಿಕೆಯಲ್ಲಿ ತೊಡಗಿರುವುದು ತುಂಬಾ ಶ್ಲಾಘನೀಯ ಕಚ್ಚಾ ವಸ್ತುಗಳಿಂದ ಕಲಿಕೆಗೆ ಹಿಂಬೂ ನೀಡುವ ಮೂಲಕ ಕಲಿಕೆ ಸದೃಡವಾಗುತ್ತದೆ ಎಂದು ಸಹ ಶಿಕ್ಷಕ ಹನುಮಂತಪ್ಪ ಹೇಳುತ್ತಾರೆ.
ಮಕ್ಕಳ ಮಾನಸಿಕ ಬುದ್ದಿ ಮಟ್ಟಕ್ಕೆ ತಕ್ಕಂತೆ ಶಿಕ್ಷಕರು ಪಾಠ ಬೋಧನೆಗಳನ್ನು ಕಲಿಸಿದಾಗ ಮಾತ್ರ ಅದು ಸಫಲ ಹೊಂದುತ್ತದೆ ಆದ್ದರಿಂದ ಇಂತಹ ವಸ್ತುಗಳಿಂದ ಮಕ್ಕಳ ಕಲಿಕೆ ಬಹು ಬೇಗ ಗ್ರಹಿಸುತ್ತದೆ ಎಂದರು.