ಚಳ್ಳಕೆರೆ : ಭಾರಿಗಾಳಿಯಿಂದ ವಿದ್ಯುತ್ ಕಂಬಗಳು ಮರಗಳು ಧರೆಗುರುಳಿದ ಘಟನೆ ಜರುಗಿದೆ.
ನಗರದ ಗಾಂಧಿನಗರದ ತಿಮ್ಮಪ್ಪ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ವಿಪರೀತ ಗಾಳಿಗೆ ವಿದ್ಯುತ್ ಪೂರೈಕೆ ಹಾಗುವ ತಂತಿ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಪೂರೈಸುವ ಕಂಬಗಳು ನೆಲಕ್ಕುರುಳಿವೆ.
ಮನೆಗಳಿಗೆ ವಿದ್ಯುತ್ ಸರಬರಾಜು ನೀಡುವ ವಿದ್ಯುತ್ ಕಂಬ ನೆಲಕುರಳಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ.
ಸೋಮವಾರ ಮಧ್ಯಾಹ್ನ ಸಮಯದಲ್ಲಿ ಬಾರಿ ಗಾಳಿಯಿಂದ ವಿದ್ಯುತ್ ಕಂಬ ನೆಲಕ್ಕುರುಳಿರುವುದು ಕಂಡುಬಂದಿದೆ.
ಇನ್ನೂ ಮನೆಯ ಮುಂದೆ ನಿಲ್ಲಿಸಿದ
ಆಟೋ ರಿಕ್ಷಾದ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಆಟೋರಿಕ್ಷಾ ಸಂಪೂರ್ಣವಾಗಿ ಜಖಂ ಹಾಗಿದೆ.
ಇನ್ನೂ ವಿದ್ಯುತ್ ಕಂಬದಲ್ಲಿ ಅಳವಡಿಸಿದ್ದ ವಿದ್ಯುತ್ ವೈರ್ ಗಳು ಮನೆಯ ಕಂಪೌಂಡ್ ಗೋಡೆ ಮೇಲೆ ಬಿದ್ದಿವೆ.
ಇದೇ ಸಮಯದಲ್ಲಿ ಯಾವುದೇ ವ್ಯಕ್ತಿಗಳು ಮನೆಯಿಂದ ಹೊರಗಡೆ ಬಾರದೇ ಇರುವುದರಿಂದ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ..