ಚಳ್ಳಕೆರೆ : ಕಳೆದ ವಾರ ಸುರಿದ ಬಾರಿ ಮಳೆಗೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಕುರಿಗಾಯಿ ಯಶವಂತ್ ಕುಮಾರ್ ಸಿಡಿಲು ಬಡಿದು ಸಾವನಪ್ಪಿರುವ ಕುಟುಂಬಕ್ಕೆ ಇಂದು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಂಬಕ್ಕೆ ಸಾಂತ್ವನ ಹೇಳಿ ಸರಕಾರದಿಂದ ಸುಮಾರು 5 ಲಕ್ಷ ಪರಿಹಾರದ ಚೆಕ್‌ನ್ನು ವಿತರಿಸಿದರು.
ಈದೇ ವೇಳೆ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಕ್ಷೇತ್ರದಲ್ಲಿ ಮುಂಗಾರು ಮುನ್ನವೆ ಭಾರಿ ಮಳೆ ಗಾಳಿಯಿಂದ ಅಫಾರ ಹಾನಿಯಾಗಿದೆ ಆದ್ದರಿಂದ ಹಾನಿಯಾದ ಪ್ರತಿ ರೈತ ಕುಟುಂಬಗಳ ಮನೆಗಳಿಗೆ ಸುಮಾರು 50 ಸಾವಿರ ಪರಿಹಾರ ನೀಡಲಾಗುವುದು, ರೈತರು, ಕುರಿಗಾಯಿಗಳು ಮಳೆ ಬರುವ ಮುನ್ನೆವೆ ಮನೆ ಸೇರಿಕೊಳ್ಳಿ ನಮ್ಮ ಪ್ರಾಣ ರಕ್ಷಣೆ ನಾವೆ ಮಾಡಿಕೊಳ್ಳಬೇಕು ಎಂದರು.
ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಗೊಳಪಡುವ ನಾಯಕನಹಟ್ಟಿ ಹಾಗೂ ತಳಕು ಹೋಬಳಿಗಳಲ್ಲಿ ಕಳೆದ ಒಂದು ವಾರದಿಂದ ಬಿದ್ದಂತಹ ಬಾರಿ ಮಳೆ ಗಾಳಿಯಿಂದ 73 ಮನೆಗಳು 713 ಎಕರೆ ತೋಟಗಾರಿಕೆ ಬೆಳೆ 13 ಕುರಿಗಳು ಹಾಗೂ ಯಶವಂತ ಕುಮಾರ್ ಎನ್ನುವ ಒಬ್ಬ ವ್ಯಕ್ತಿ ಪಟ್ಟಿದ್ದು ಹಾನಿಯಾಗಿರುತ್ತದೆ ಇದಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಒಳಗಾಗಿ ಸಂಬಂಧಸಿದ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು
ಅತಿ ಮಳೆಯಿಂದ ಕಳೆದ ವರ್ಷದಲ್ಲಿ ಎರಡು ಹೋಬಳಿಯಲ್ಲಿ 32000 ಎಕ್ಟರ್ ಜಮೀನಿಗೆ ಪರಿಹಾರ ವಿತರಿಸಲಾಗಿದೆ 233 ಮನೆಗಳ ಸಂತ್ರಸ್ತರಿಗೂ ಪರಿಹಾರ ವಿತರಿಸಲಾಗಿದೆ ಮುಂದೆಯೂ ಘಟನೆ ಸಂಭವಿಸಿದರೆ ತಕ್ಷಣ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ತಾಸಿಲ್ದಾರ್ ಎನ್ ರಘು ಮೂರ್ತಿಯವರಿಗೆ ಸೂಚಿಸಿದರು.
ಮೃತ ಯಶವಂತ್ ಕುಮಾರ್ ಇವರ ಕುಟುಂಬಸ್ಥರಿಗೆ ವೈದ್ಯಕೀಯ ವೆಚ್ಚ ಮತ್ತು ವೈದ್ಯಕೀಯ ದರವನ್ನು ನೀಡುವುದಾಗಿ ಭರವಸೆ ನೀಡಿದರು
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಇಡೀ ಜಿಲ್ಲೆಯಲ್ಲೇ ಹೆಚ್ಚಿನ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ ಆದರಂತೆ ಹೆಚ್ಚಿನ ಪರಿಹಾರ ಕೂಡ ನೀಡಿದೆ, ಇಡೀ ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವಂತೆ ಸಚಿವರು ಸೂಚಿಸಿದ ಮೇರೆಗೆ ಈಗಾಗಲೇ ಮೊಳಕಾಲ್ಮೂರು ಕ್ಷೇತ್ರದ 24 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ
ಈ ಗ್ರಾಮಗಳಲ್ಲಿ ಪೌತಿಖಾತೆ ಪೋಡಿ ಪಿಂಚಣಿ ಸ್ಮಶಾನ ದಾರಿ ಮತ್ತು ನೈರ್ಮಲ್ಯಕ್ಕೆ ಸಂಬಂಧಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗಿದೆ ಸಚಿವರ ಸೂಚನೆಯಂತೆ ಉಳಿದ ಗ್ರಾಮಗಳನ್ನು ಸಂಪೂರ್ಣವಾಗಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮುಂದಿನ ಆರು ತಿಂಗಳೊಳಗೆ ಮಾಡಲಾಗುವುದೆಂದು ಹೇಳಿದರು
ಇದೇ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ರಾವiರೆಡ್ಡಿ, ಜೈ ಪಾಲಯ, ಮುಖಂಡರಾದ ಮಲ್ಲೇಶ್, ಹೊನ್ನೂರ್ ಗೋವಿಂದಪ್ಪ, ಪಾತಪ್ಪನಗುಡಿ ಸುರೇಶ್ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಮುಖಂಡ ಆಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು