ಕಲಿಕಾ ಕೊಠಡಿ ಬಿದ್ದ ಎಂಟು ತಿಂಗಳಾದರೂ ಎಚ್ಚೆತ್ತುಕೊಳ್ಳದ ಸರಕಾರ
ಶಾಸಕರ ಅನುದಾನದಲ್ಲಿ ದುರಸ್ಥಿ ಕೊಠಡಿ ನಿರ್ಮಾಣಕ್ಕೆ ಭರವಸೆ
ರಾಮು ದೊಡ್ಮನೆ ಚಳ್ಳಕೆರೆ
ಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಸುಮಾರು ಎಂಟು ತಿಂಗಳು ಕಳೆದರೂ ನೂತನ ಕೊಠಡಿಗಳಿಗೆ ಕಾಯಕಲ್ಪ ಇಲ್ಲದೆ ಮಕ್ಕಳಿಗೆ ಮರದ ಕೆಳಗೆ ಕೂತು ಪಾಠ ಕೇಳುವ ದುಸ್ಥಿತಿ ಬಂದೊದಗಿದೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಬಂದು ಗೋಡೆ ಕುಸಿದಿತ್ತು ಸಂಬಂದಸಿದ ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು, ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಗೆ ಮನವಿ ನೀಡಿದ್ದೆವೆ ಎಂದು ಪೋಷಕರ ಆರೋಪ ಮಾಡುತ್ತಿದ್ದಾರೆ. ಮಲ್ಲೂರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 109 ಹೊಂದಿದ್ದು ಒಂದರಿಂದ ಏಳನೇ ತರಗತಿಯವರೆಗೆ ಮ್ಕಕಳು ವ್ಯಾಸಂಗ ಮಾಡುತ್ತಿದ್ದಾರೆ,
ನಾಲ್ಕು ಜನ ಶಿಕ್ಷಕರು, ನಾಲ್ಕು ಕೊಠಡಿಗಳಲ್ಲಿ ಮಾತ್ರ ಕಲಿಕಾ ಚಟುವಟಿಕೆಗಳು ನಡೆಯುತ್ತಿವೆ ಇನೂ ಎರಡು ಕಲಿಕಾ ಕೊಠಡಿಗಳ ಗೊಡೆ ಕುಸಿದು ಹಾನಿಯಾದ ಕಾರಣ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಲೇ ಮುಖ್ಯೋಪಾಧ್ಯಾಯರ ಕೊಠಡಿ ಕೂಡ ಬೀಳುವ ಹಂತದಲ್ಲಿದೆ 109 ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಕೊಠಡಿಗಳು ಮಾತ್ರ ಇವೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಎರಡು ಕೊಠಡಿಗಳ ಅವಶ್ಯವಿದೆ ಎನ್ನಲಾಗಿದೆ
ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಪರಿಸ್ಥಿತಿ ಈ ಭಾಗದ ಶಿಕ್ಷಕರಿಗೆ ಬಂದೊದಗಿದೆ, ಶತಮಾನಗಳ ಕಾಲ ಮಕ್ಕಳಿಗೆ ನಿರಂತರ ಶಿಕ್ಷಣ ಕಲಿಸಿದ ಜ್ಞಾನದೇಗುಲಗಳು ಇಂದು ನಿರ್ಗತಿಕವಾಗಿ ಬಡವಾಗುತ್ತಿವೆ, ರಾಜ್ಯದ ತುಂಬೆಲ್ಲ ಸರಕಾರಿ ಶಾಲೆ ಉಳಿವಿಗೆ ಹಲವು ಅಭಿಯಾನಗಳು ಪ್ರಾರಂಭವಾಗಿವೆ ಆದರೆ ಇತ್ತ ಗಡಿ ಗ್ರಾಮಗಳತ್ತ ಮಾತ್ರ ಮುಖ ಮಾಡದೇ ಕೇವಲ ನಗರ ಸುತ್ತಲಿನ ಕೆಲವು ಶಾಲೆಗಳಿಗೆ ಮಾತ್ರ ಕನ್ನಡಭಿಮಾನಿಗಳು ಕಂಕಣ ಬಧ್ದರಾಗುತ್ತಿದ್ದಾರೆ. ಕ್ನನಡ ಶಾಲೆಗಳ ಉಳಿವಿನತ್ತ ಹೋರಾಟ ನಡೆಸುವಂತಾಗಿದೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ್, ಗ್ರಾಮಸ್ಥರಾದ ಜೆ.ಆರ್. ನಾಗರಾಜ್, ಎಂಎಸ್. ವಸಂತ, ಎಸ್.ತಿಪ್ಪೇಸ್ವಾಮಿ, ಡಿ.ಶಂಕ್ರಪ್ಪ, ಶಿವಣ್ಣ, ಓಬಳೇಶ, ಟಿ.ಪ್ರಕಾಶ್, ಸಂತೋಷ್, ನಾಗೇಂದ್ರಪ್ಪ, ಮುಸ್ಠೂರಪ್ಪ, ನಿಂಗರಾಜ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
1..ಮರದ ನೆಲರಳಿನಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ, ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಗೋಡೆ ಕುಸಿದು ಶಾಲಾ ಕೊಠಡಿ ಬಿದ್ದಿವೆ, ಆದರೆ ಇದು ವರೆಗೂ ಕಟ್ಟಡ ನಿರ್ಮಾಣವಾಗಿಲ್ಲ, ಆದಷ್ಟು ಬೇಗ ಇತ್ತ ಕಡೆ ಗಮನಹರಿಸಿ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು.
–ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಕೆಂಗುರುದ್ರಪ್ಪ ,
2..ಮಳೆಗೆ ಹಾನಿಯಾದ ಶಾಲಾ ಕೊಠಡಿಗಳ ವರದಿ ಮಾಡಿ ಸರಕಾರಕ್ಕೆ ಕಳಿಸಿದೆ ಅದರಂತೆ ಇನ್ನೂ ಕೆಲವೆ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲಾ ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳು ಹಾಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿರುವ ಕಲಿಕಾ ಕೊಠಡಿಗಳಿಗೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ರವಾನಿಸಲಾಗಿದೆೆ.
–ಕೆ.ಎಸ್.ಸುರೇಶ್ ಕ್ಷೇತ್ರ ಶೀಕ್ಷಣಾಧಿಕಾರಿಗಳು
3..ಕ್ಷೇತ್ರ ವ್ಯಾಪ್ತಿಯಲ್ಲಿ ದುಸ್ಥಿಯಲ್ಲಿರುವ ಶಾಲಾ ಕೊಠಡಿಗಳ ಮಾಹಿತಿ ಪಡೆಯಲಾಗಿದೆ ಸಂಭAಧಿಸಿದ ಜಿಲ್ಲಾ ಡಿಡಿಪಿಐ ಹಾಗೂ ಬಿಇಓರವರನ್ನು ಕರೆದುಕೊಂಡು ನಾಳೆಯೇ ಶಾಲೆಗೆ ಬೇಟಿ ನೀಡಿ ದುಸ್ಥಿತಿ ಕೊಠಡಿಗಳಿಗೆ ಶಾಸಕರ ಅನುದಾನ ನೀಡಿ ಕ್ಷೇತ್ರ ವ್ಯಾಪ್ತಿಯ ದುಸ್ಥಿತಿಯಾದ ಶಾಲಾ ಕೊಠಡಿಗಳಿಗೆ ಇನ್ನೂ ಒಂದು ವಾರ ಗಡುವು ನೀಡಿ ವಾರದಲ್ಲಿ ಕ್ಷೇತ್ರದಲ್ಲಿ ದುಸ್ಥಿತಿಯಾದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಚಿವರ ಮಾರ್ಗಸೂಚಿಯಲ್ಲಿ ಮಂಜೂರಾತಿ ನೀಡಲಾಗುವುದು.
–ಪಾಪೇಶ್ ನಾಯಕ ಸಚಿವರ ಆಪ್ತ ಸಹಾಯಕ