ಚಳ್ಳಕೆರೆ :
ಕನ್ನಡ ಜ್ಯೋತಿ ರಥಯಾತ್ರೆಯಲ್ಲಿ ಸ್ವಾಗತ ಬಯಸಲು ಚಳ್ಳಕೆರೆ ನಗರದಲ್ಲಿ ಹಾಕಿದಂತ ಫ್ಲೆಕ್ಸ್ ಬ್ಯಾನರ್ ಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಿತ್ತು ಹಾಕಿರುವ ಘಟನೆ ನಡೆದಿದೆ.
ಇನ್ನು ಬ್ಯಾನರ್ ಗಳನ್ನು ಕಿತ್ತು ಹಾಕಿರುವ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಚಳ್ಳಕೆರೆ ನಗರದಲ್ಲಿ ಜು.12 ರಂದು ಕರ್ನಾಟಕ ಜ್ಯೋತಿ ರಥಯಾತ್ರೆ ಆಗಮನದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು, ಸಾಹಿತ್ಯ ಪರಿಷತ್ತು, ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆ ಇನ್ನು ಹಲವಾರು ಕನ್ನಡಪರ ಸಂಘಟನೆಗಳು ಕನ್ನಡ ಜ್ಯೋತಿ ರಥಯಾತ್ರೆ ಅಂಗವಾಗಿ ಚಳ್ಳಕೆರೆ ನಗರದ ನೆಹರು ವೃತ್ತ, ಅಂಬೇಡ್ಕರ್ ವೃತ್ತ , ವಾಲ್ಮೀಕಿ ವೃತ್ತದ ಸಮೀಪ ಬ್ಯಾನರ್ ಗಳನ್ನು ಅಳವಡಿಸಿದ್ದರು ಎನ್ನಲಾಗಿದೆ.
ಇನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿ ಮಾರುತಿ, ರಾಧಾಕೃಷ್ಣ, ಇನ್ನಿತರ ಹಲವಾರು ಪದಾಧಿಕಾರಿಗಳು ರಾತ್ರೋ ರಾತ್ರಿ ಬ್ಯಾನರ್ ಕಿತ್ತು ಹಾಕಿದ ದುಷ್ಕರಿಮಿಗಳನ್ನು ಪತ್ತೆಹಚ್ಚಲು
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ