ರಾಷ್ಟ್ರೀಯ ಲೋಕ ಅದಾಲತ್ ಇಂದು ಚಳ್ಳಕೆರೆಯಲ್ಲಿ ನಡೆಸಲಾಯಿತು ,

ಚಳ್ಳಕೆರೆ ;
ಕೋರ್ಟ್ ಅದಾಲತ್ ಅನ್ನುವುದು ಕಕ್ಷಿಧಾರರ ರಾಜಿಮೇಳ ಎನ್ನುತ್ತಾರೆ ಈ ಲೋಕ ಅದಾಲತ್ ಮಾಡುವುದರಿಂದ ಜನಸಾಮಾನ್ಯರು ಕೇಸುಗಳಿಂದ ಇತ್ಯರ್ಥವಾಗಿ ನೆಮ್ಮದಿಯಿಂದ ಇರುತ್ತಾರೆ ಎಂದು ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹೇಳಿದರು,

ಇವರು ನಗರದ ಕೋರ್ಟ್ ಆವರಣದ ಮುಂಭಾಗದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಪತ್ರಕರ್ತರೊಂದಿಗೆ ಸಂಹಾದ ನಡೆಸಿ ಮಾತನಾಡಿದ ಇವರು ,

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಸಣ್ಣ ಪುಟ್ಟ ವಿಷಯಕ್ಕೆ ಹಾಗೂ ದೊಡ್ಡ ವಿಷಯಕ್ಕೆ ಕೋರ್ಟ್ ಮೆಟ್ಟಲು ಹತ್ತುತ್ತಾರೆ ಏಕೆಂದರೆ ಅವರಿಗೆ ಸೂಕ್ತವಾದ ನ್ಯಾಯ ಸಿಗಲಿ ಎಂದು ಬರುವುದು ಸಹಜ,

ನೀವು ಹಾಕಿರುವ ಕೇಸುಗಳು ವರ್ಷಗಟ್ಟಲೆ ಕೋರ್ಟಿಗೆ ಅಲೆದಾಡಿ ತಮ್ಮ ದುಡಿಮೆ ದುಡ್ಡು ಮರ್ಯಾದೆಯನ್ನು ಕಳೆದುಕೊಳ್ಳುತ್ತಾರೆ ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಎಂದು ದೇಶಾದ್ಯಂತ ಕೋರ್ಟ್ ಆದೇಶದ ಮೇರೆಗೆ ಜಡ್ಜುಗಳು ಕುಳಿತು ಕಕ್ಷಿದಾರರಿಗೆ ರಾಜಿ ಮಾಡಿಸುವಂತಹ ಕೆಲಸವಾಗುತ್ತದೆ,

ರಾಜಿ ಆಗುವುದರಿಂದ ಗಲಾಟೆ ಗದ್ದಲಗಳು ಇರದೆ ನೆಮ್ಮದಿಯ ಬಾಳ್ವೆಯನ್ನು ಸಂತೋಷ ಸ್ನೇಹ ಬಾಂಧವ್ಯ ಮುಖಾಂತರ ಸಮಾಜದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು,

ಕೋರ್ಟ್ ಅದಾಲತ್ ನಂತರ ರಾಜಿ ಆದ ಮೇಲೆ ಮುಂದೆ ಅಪಿಲ್ ಹೋಗಲಿಕ್ಕೆ ಸಾಧ್ಯವಿಲ್ಲ ಇದರಿಂದ ಜನಸಾಮಾನ್ಯರ ಕಷ್ಟಗಳು ದೂರವಾಗುತ್ತವೆ ಗಲಾಟೆ ಗದ್ದಲಗುಳು ಕೂಡ ನಿಂತು ಹೋಗುತ್ತದೆ ಹಾಗೂ ಜನಸಾಮಾನ್ಯರು ಈ ವಿಷಯವನ್ನು ಅರಿತು ನಿಮ್ಮ ನಿಮ್ಮ ಕೇಸುಗಳನ್ನು ಕಕ್ಷಿದಾರರು ಕೋರ್ಟ್ ಅದಾಲತ್ ಮೂಲಕ ವ್ಯಾಜ್ಯವನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ತಿಳಿಸಿದರು,

ಇನ್ನು ಈ ಸಂದರ್ಭದಲ್ಲಿ ಜಡ್ಜ್ ಮುಖಾಂತರ ಹಲವಾರು ಕೇಸುಗಳು ವಿದ್ಯಾರ್ಥಿಗೊಂಡಿವೆ

ಇನ್ನು ಈ ಸಂದರ್ಭದಲ್ಲಿ ವಕೀಲರಾದ ಹನುಮಂತರಾಜು, ನಾಗರಾಜ್, ನಾಗರತ್ನ ಮೇಡಂ ಸೇರಿದಂತೆ ಅನೇಕರು ಇದ್ದರು

Namma Challakere Local News
error: Content is protected !!