ಚಿತ್ರದುರ್ಗ : ನಿರ್ಜನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿದ ಕೋಟೆ ನಾಡಿನ ಪೋಲಿಸರು

ಬಂಧಿತರಿಂದ ಆಟೋ,ದ್ವಿಚಕ್ರ ವಾಹನ,ಹಾಗೂ ಎರಡು ಸಾವಿರ ನಗದು,8 ಕೆಜಿ ಗಾಂಜ ವಶಕ್ಕೆ ಪಡೆದ ನಗರ ಠಾಣೆ ಪೋಲಿಸರು

ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜ ತಂದು ಮಾರುತ್ತಿದ್ದ 8 ಜನರ ತಂಡ

ದಾದಪೀರ್, ದಸ್ತಗೀರ್, ನೂರುಲ್ಲ,ಸೋಮ,ಬಾಸ್ಕರ್,ಗೌಸ್ ಪೀರ್,ಬಾಸ್ಕರಾಚಾರಿ ಬಂಧಿತ ಅರೋಪಿಗಳು

ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ.ನಯೀಂಅಹಮದ್ ನೇತ್ರತ್ವದಲ್ಲಿ ಚಿತ್ರದುರ್ಗ ನಗರದ ಜಟ್ ಪಟ್ ನಗರದಿಂದ ಕುರುಬರ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ
ಸ್ಮಶಾನದ ಮುಂಭಾಗದಲ್ಲಿ ಗಾಂಜಾ ಸೊಪ್ಪನ್ನು ಮಾರುವುದು ಮತ್ತು ಸೇದುವುದು ಮಾಡುತ್ತಿದ್ದಾರೆ
ಎಂಬ ಖಚಿತ ಮಾಹಿತಿ ಮೇರೆಗೆ

ಚಿತ್ರದುರ್ಗ ಜಿಲ್ಲಾ ಪೊಲೀಸ್ ಶ್ರೀ.ಪರಶುರಾಮ್.ಕೆ, ಪೊಲೀಸ್ ಅಧೀಕ್ಷಕರು , ಶ್ರೀ.ಕುಮಾರಸ್ವಾಮಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ.ಪಾಂಡುರಂಗ ಪೊಲೀಸ್
ಉಪಾಧೀಕ್ಷಕರು ಚಿತ್ರದುರ್ಗ ಉಪವಿಭಾಗರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ನಗರ ಠಾಣೆಯ ಎ.ಎಸ್.ಐ ಸೈಯದ್
ಸಿರಾಜುದ್ದಿನ್ ಮತ್ತು ಠಾಣಾ ಸಿಬ್ಬಂದಿಯವರಾದ ಶ್ರೀನಿವಾಸ, ರಂಗಸ್ವಾಮಿ, ಬೀರೇಶ್, ಶಿವರಾಜ್ ರವರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಗಾಂಜಾ ಸೊಪ್ಪನ್ನು ಮಾರಾಟ
ಮಾಡುತಿದ್ದ ಮೂವರು, ಗಾಂಜಾ ಸೊಪ್ಪನ್ನು ಸೇದುತಿದ್ದ 6 ಜನ
ಆಸಾಮಿಗಳನ್ನು ವಶಕ್ಕೆ ಪಡೆದಿದ್ದು,

ಗಾಂಜಾ ಸೊಪ್ಪನ್ನು ಸೇದುತ್ತಿದ್ದವರು ದಾದಾಪೀರ್ , ಬಾಸ್ಕರಾ ಚಾರಿ, ಗೌಸ್ ಪೀರ್ , ಬಾಬಾ ಪಕೃದಿನ್, ಸಾತ್ವಿಕ್ ಈ ಎಲ್ಲಾರದು ಚಿತ್ರದುರ್ಗ
ಎಂದು ತಿಳಿದು ಬಂದಿದೆ

ಮೇಲ್ಕಂಡ ಆರೋಪಿಗಳ ಪೈಕಿ ಸೀನಾ, ಸೋಮಶೇಖರ್ ,ಭರತ್
ಇವರುಗಳು ಆಂಧ್ರಪ್ರದೇಶದ ವಿಶಾಕ ಪಟ್ಟಣಕ್ಕೆ ದಿಂದ ಚಿತ್ರದುರ್ಗದಲ್ಲಿ ಜಟ್-ಪಟ್ ನಗರದ ಬಳಿ ಇರುವ ಸ್ಮಶಾನ, ಗುಡ್ಡ, ಜಾಲಿಗಳಲ್ಲಿ, ಅಗಳೇರಿಯ ಕೆಂಚಪ್ಪನ ಬಾವಿ
ಹಾಗೂ ಗುಡ್ಡದ ಕಡೆಗಳಲ್ಲಿ ಹಾಗೂ ಇತರೆ ನಿರ್ಜನ ಪ್ರದೇಶಗಳಿಗೆ ಗ್ರಾಹಕರನ್ನು ಕರೆಯಿಸಿಕೊಂಡು ಮಾರಾಟ ಮಾಡುತ್ತಿರುತ್ತಾರೆ ಎಂದು
ತಿಳಿದು ಬಂದಿರುತ್ತದೆ

ವಶಪಡಿಸಿಕೊಂಡ ಒಟ್ಟು ಮಾಲು
8 ಕೆ.ಜಿ ಮೌಲ್ಯದ ಅಂದಾಜು 80000=00 ರೂ ಬೆಲೆ ಬಾಳುವ ಒಣಗಿದ ಗಾಂಜಾ ಸೊಪ್ಪು, ಆಟೋ, ಹಾಗೂ 2000 ನಗದು ಹಣ

ಸದರಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಯವರ ಕಾರ್ಯವನ್ನು
ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ರವರು ಶ್ಲಾಘಿಸಿರುತ್ತಾರೆ.

Namma Challakere Local News
error: Content is protected !!