ಚಳ್ಳಕೆರೆ : ರೈತರು ಕಟ್ಟಿದ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಕಾಲಕ್ಕೆ ತಕ್ಕಂತೆ ಹಾಕದೆ ರೈತರ ಜೀವನ ಜೊತೆ ಚೆಲ್ಲಾಟ ವಾಡುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು
ನಗರದ ತಾಲೂಕು ಕಛೇರಿಯ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಆಮ್ ಆದ್ಮಿ ಪಕ್ಷ, ಹಾಗೂ ರೈತ ಕಿಸಾನ್ ಸಭಾದಿಂದ ಹಮ್ಮಿಕೊಂಡ ಧರಣಿ ಸತ್ಯಾಗ್ರಹದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕೊವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ, ಒಂದು ಕಡೆ ಪ್ರಕೃತಿ ವಿಕೋಪದಿಂದ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮತ್ತೊಂದೆಡೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು ಈಗಿದ್ದರು ಕೂಡ ಸರಕಾರ ಬೆಳೆದ ಬೆಳೆಗೆ ಬೆಳೆ ಪರಿಹಾರ ಕೂಡ ಸರಿಯಾದ ಸಮಯಕ್ಕೆ ನೀಡದೆ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಹಾಗೂ ಬೆಳೆನಷ್ಟ ಪರಿಹಾರ ಒದಗಿಸಬೇಕು, ವಿಮೆಯನ್ನು
ಕಾರ್ಪೋರೇಟ್ ಕಂಪನಿಗೆ ಕೊಟ್ಟು
ರೈತರನ್ನು ಗುಲಾಮರನ್ನಾಗಿ ಮಾಡಲು ಸರ್ಕಾರ ಹೊರಟಿವೆ’ ಎಂದು ಆರೋಪಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ
ಶ್ರೀಕಂಠಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ 200 ಗ್ರಾಮದ ರೈತರು ಕೃಷಿ ಅವಲಂಬಿಸಿ
ಜೀವನ ನಡೆಸುತ್ತಿದ್ದಾರೆ. ಬೆಳೆ ವಿಮೆ
ನೀಡದ ಕಾರಣ ಅವರ ಕುಟುಂಬ
ನಿರ್ವಹಣೆ ಕಷ್ಟವಾಗಿದೆ’ ಎಂದರು.
ರೈತ ಮುಖಂಡ ಜಿ.ಎಚ್.
ಹನುಮಂತಪ್ಪ, ‘ರೈತರ ವಿಮಾ ಮೊತ್ತ ಜಮೆ ಹಾಗುವರೆಗೂ ಧರಣಿ ಸತ್ಯಾಗ್ರಹ ಹಿಂಪಡೆಯುದಿಲ್ಲ
ಎಂದು ತಿಳಿಸಿದರು.
ಈದೇ ಸಂಧರ್ಭದಲ್ಲಿ ಗಿರಿಯಮ್ಮನಹಳ್ಳಿ ತಿಪ್ಪೇಸ್ವಾಮಿ,
ವರವು ತಿಪ್ಪೇಸ್ವಾಮಿ, ತಾಲ್ಲೂಕು
ಪ್ರಧಾನ ಕಾರ್ಯದರ್ಶಿ ವಡೆರಹಳ್ಳಿ
ಬಸವರಾಜ, ರಾಜಣ್ಣ, ಜಯಣ್ಣ ಇದ್ದರು.
ಸ್ಥಳಕ್ಕೆ ಜಿಲ್ಲಾ ಜಂಟಿ ಸಹಾಯಕ ನಿರ್ದೇಶಕ ರಮೇಶ ಕುಮಾರ್ ಬೇಟಿ ನೀಡಿ, ಈಗಾಗಲೇ ರಾಜ್ಯದಲ್ಲಿ ಬೆಳೆ ಪರಿಹಾರ 32 ಕೋಟಿ ಪರಿಹಾರ ಚಳ್ಳಕೆರೆ ತಾಲೂಕಿಗೆ ಬಂದಿದೆ, ಆದರೆ ಬೆಳೆ ವಿಮೆ ಬರುವುದು ಬಾಕಿ ಇದೆ ಇನ್ನೂ ಇಪ್ಪತ್ತು ದಿನಗಳ ಒಳಗೆ ಚಳ್ಳಕೆರೆ ತಾಲೂಕಿನ40 ಗ್ರಾಮ ಪಂಚಾಯತಿ ಗಳಿಗೆ ಸುಮಾರು50 ಕೋಟಿ ಪರಿಹಾರ ಬರುವ ನಿರೀಕ್ಷೆ ಇದೆ, ಎಂದರು
ಗ್ರೇಡ್ ೨ ತಹಶೀಲ್ದಾರ್ ಸಂಧ್ಯಾ ಮಾತನಾಡಿ ಇನ್ನೂ ಇಪ್ಪತ್ತು ದಿನಗಳ ಒಳಗೆ ನೀವು ಪಾವತಿಸಿದ ವಿಮಾ ಮೊತ್ತವನ್ನು ಜಮೆ ಮಾಡುತ್ತೆವೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕೃಷಿ ಜಂಟಿ ನಿರ್ದೇಶಕರ ಮೂಲಕ ಚರ್ಚಿಸಲಾಗಿದೆ ಇಪ್ಪತ್ತು ದಿನಗಳ ಒಳಗೆ ಜಮೆ ಮಾಡದಿದ್ದರೆ ನಮ್ಮ ಕಚೇರಿ ಸಂಪರ್ಕಿಸಿ ಎಂದು ಭರವಸೆ ನೀಡಿದರು.
ಈದೇ ಸಂಧರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ಜೆ.ಅಶೋಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್.ವಿರುಪಾಕ್ಷಪ್ಪ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ, ಇತರರು ಪಾಲ್ಗೊಂಡಿದ್ದರು.